ಅನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ಟೂಡೆಂಟ್ ಟಾಕ್ , ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಮಹಾರಾಷ್ಟ್ರದ ವಿಜ್ಞಾನಿಯಾದ ನಿತೀಶ್ ನಾಗರಾಜ್ ಮೌರ್ಯರು ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಶಿಕ್ಷಣದ ಮಹತ್ವ ವಿದ್ಯಾರ್ಥಿ ಜೀವನದಲ್ಲಿ ಇರಬೇಕಾದ ಕಾಳಜಿ ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಸಂವಿಧಾನದ ಮಹತ್ವ ಹೀಗೆ ನಾನಾ ರೀತಿಯ ಚರ್ಚೆಗಳು ನಡೆದವು. ಇನ್ನು ಸ್ಟೂಡೆಂಟ್ ಟಾಕ್ ಎಂಬ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು ಇನ್ನು ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ಸ್ಟುಡೆಂಟ್ ಪಾರ್ಲಿಮೆಂಟ್ ಅಸೋಸಿಯನ್ ವಹಿಸಿಕೊಂಡಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ವಿಜ್ಞಾನಿ ನಿತಿನ್ ನಾಗರಾಜ ಮೌರ್ಯ ,ಹೊಸಬೆಳಕು ಟ್ರಸ್ಟ್ ರಾಮಕೃಷ್ಣ ವಕೀಲ ಆನಂದ್ ಚಕ್ರವರ್ತಿ ಸಂಘಟನೆ ಹೋರಾಟಗಾರ ನಾಗರಾಜ್ ಮೌರ್ಯ, ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾವಣ ಭಾಗಿಯಾಗಿದ್ದರು
Kshetra Samachara
03/07/2022 08:32 pm