ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಿಜಾಬ್ ತೀರ್ಪು ಅಸಂವಿಧಾನಿಕ: ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ

ಹಿಜಾಬ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇಂದು ಸುದ್ದಿಗೋಷ್ಠಿ ನಡೆಸಿದೆ. ಅಸಂವಿಧಾನಿಕ ತೀರ್ಪಿಗೆ ಅಸಮ್ಮತಿ ಎನ್ನುತ್ತಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ನ್ಯಾಯದ ನಿರೀಕ್ಷೆಯಲ್ಲಿದ್ದ ತೀರ್ಪು ನಿರೀಕ್ಷೆ ಮಾಡಿದ್ವಿ. ಆದರೆ ತೀರ್ಪು ಖೇದಕರ ತೀರ್ಪು ಆಗಿದೆ. ಸರ್ಕಾರದ ಆದೇಶಗಳನ್ನೇ ಕೋರ್ಟ್ಎತ್ತಿ ಹಿಡಿದಿದೆ ಎಂದು ತಿಳಿಸಿದೆ.

ಶಿರವಸ್ತ್ರವನ್ನು ಇಸ್ಲಾಂನ ಕಡ್ಡಾಯ ಆಚರಣೆಯೇ ಅಲ್ಲ ಎಂದು ಹೈ ಕೋರ್ಟ್ ತಿಳಿಸಿದೆ. ಇದು ರಾಜ್ಯದ ಮುಸಲ್ಮಾನ ಸಮುದಾಯಕ್ಕೆ ಬಹಳ ಆಘಾತ ತಂದಿದೆ.

ನ್ಯಾಯಾಲಯವು ಅಸಂವಿಧಾನಿಕವಾಗಿ ತೀರ್ಪನ್ನು ಪ್ರಕಟಿಸಿದೆ. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವೇ ಎಂದು ಪ್ರಶ್ನಿಸಿದೆ. ಇದು ಸಂಪೂರ್ಣವಾಗಿ ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘಿಸುವ ರೀತಿ. ಏಕೆಂದರೆ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ವಿಚಾರವೇ ಉದಾಹರಣೆ. ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಇನ್ನು ಬಾಕಿ ಇದೆ ಎಂದು ರಾಜ್ಯ ಕಾರ್ಯದರ್ಶಿ ಸರ್ಫರಾಜ್ ಗಂಗಾವತಿ ಹೇಳಿದ್ದಾರೆ.

Edited By :
Kshetra Samachara

Kshetra Samachara

21/03/2022 06:06 pm

Cinque Terre

1.76 K

Cinque Terre

0

ಸಂಬಂಧಿತ ಸುದ್ದಿ