ಲಾಕರ್ ನಲ್ಲಿ ಲಕ್ಷ ಲಕ್ಷ ಹಣ ಇದ್ರೂ ಓಪನ್ ಮಾಡಲಾಗದೆ ಕಳ್ಳರ ಪೀಕಲಾಟ ಪಟ್ಟಿದ್ದಾರೆ. ಮೀಸೆ ಚಿಗುರುವ ವಯಸ್ಸಿನ ಖದೀಮರ ಪರದಾಟ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂದಿರಾನಗರದಿಂದ ಕದ್ದ ಬೈಕ್ ನಲ್ಲಿ ಬಂದ ಚೋರರು ದೊಡ್ಡ ಏರಿಯಾದಲ್ಲಿ ದೊಡ್ಡ ಶಾಪ್ ಗೆ ಎಂಟ್ರಿ ಕೊಟ್ಟು, ಲಕ್ಷ ಲಕ್ಷ ಲೂಟಿಯ ಕನಸು ಕಂಡಿದ್ರು.
ಒಂದೇ ರಾತ್ರಿ ಬೆಂಗಳೂರಿನ ಸಂಜಯ್ ನಗರದಲ್ಲಿ ಸರಣಿಗಳ್ಳತನ ನಡೆಸಿದ್ದ ಖತರ್ನಾಕ್ ಕಳ್ಳರು, ಸಂಜಯ್ ನಗರದ 2 ಅಂಗಡಿಯಲ್ಲಿ ಫ್ಲಾಪ್ ಆದ್ರಿಂದ ಆರ್ ಎಂವಿ 2ನೇ ಸ್ಟೇಜ್ ನ ಸ್ಟಾರ್ ಬಕ್ಸ್ ಗೆ ಎಂಟ್ರಿ ಕೊಟ್ಟು ಅಲ್ಲೂ ಕಳ್ಳರು ಪ್ಲಾಫ್ ಆದ್ರು. ಕೆಲ ನಿಮಿಷ ತಡಕಾಡಿ ಕೊನೆಗೆ ಚಿಲ್ಲರೆ ಇದ್ದ ಬಾಕ್ಸ್ ಹಾಗೂ ಚಾಕ್ಲೇಟ್ ಕದ್ದ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಈ ಬಗ್ಗೆ ಅಂಗಡಿ ಮಾಲೀಕ ಸದಾಶಿವನಗರ ಠಾಣೆಗೆ ದೂರು ನೀಡಿದ್ರು. ತನಿಖೆ ಕೈಗೊಂಡ ಪೊಲೀಸರು ರೋಹಿತ್ ಗಿರಿ ಎಂಬಾತನನ್ನು ಬಂಧಿಸಿದ್ದಾರೆ. ಈ ಹಿಂದೆ ಜೈಲು ಸೇರಿ, ವಾಪಸ್ ಬಂದರೂ ಬುದ್ಧಿ ಬಿಡದ ಆರೋಪಿ ಸಿಗರೇಟಿನ ಶೋಕಿಗಾಗಿ ಅಂಗಡಿಗೆ ಕನ್ನ ಹಾಕಲು ಹೋಗಿದ್ದಾಗಿ ತಿಳಿದು ಬಂದಿದೆ. ಈತನಿಗೆ ಸಾಥ್ ನೀಡಿದ್ದ ಉಳಿದ ಆರೋಪಿಗಳಿಗಾಗಿ ಪೊಲೀಸ್ರು ಶೋಧ ನಡೆಸುತ್ತಿದ್ದಾರೆ.
Kshetra Samachara
06/04/2022 12:00 pm