ಬೆಂಗಳೂರು: ಕಬ್ಬನ್ ಪಾರ್ಕ್‌ಗೆ ಸಾರ್ವಜನಿಕರು ನಾಯಿಗಳನ್ನು ವಾಯುವಿಹಾರಕ್ಕಾಗಿ ಕರೆದುಕೊಂಡು ಬರುವುದಕ್ಕೆ ಇನ್ಮುಂದೆ ನಿರ್ಬಂಧ ಹೇರುವ ಸಾಧ್ಯತೆ ಇದೆ.
ಮುಂದಿನ ತಿಂಗಳು ಜುಲೈ 1ರಂದೇ ಜಾರಿಗೆ ಬರುವಂತೆ ನಿಷೇಧ ಹೇರಲು ಆಡಳಿತ ಮುಂದಾಗಿದೆ. ಕಳೆದ 6 ತಿಂಗಳಿನಿಂದ ವಾಯುವಿಹಾರಿಗಳು ಮತ್ತು ಜಾಗಿಂಗ್ ಮಾಡುವವರಿಂದ ಪದೇ ಪದೆ ದೂರು ಬಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಸಾಕುನಾಯಿ ನಿಷೇಧಿಸಲು ಚಿಂತನೆ ನಡೆದಿದೆ.
ಈ ನಿಟ್ಟಿನಲ್ಲಿ ಜುಲೈ 1ರಿಂದ ಗೇಟ್‌ಗಳಲ್ಲಿ ಬ್ಯಾನರ್ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಉದ್ಯಾನವನಗಳಲ್ಲಿ ಸಾಕುಪ್ರಾಣಿಗಳಿಗೆ ಇರುವ ಮಾರ್ಗಸೂಚಿ ನಿರಂತರ ಉಲ್ಲಂಘಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಬ್ಬನ್ ಪಾರ್ಕ್ ಒಳಗೆ ಸಾಕುನಾಯಿ ನಿಷೇಧಿಸುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಿಸಲಾಗಿದೆ.
ಸಾಕುಪ್ರಾಣಿ ನಿಷೇಧದ ಬಗ್ಗೆ ಜನರಿಗೆ ತಿಳಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕಬ್ಬನ್ ಪಾರ್ಕ್ ಉಪನಿರ್ದೇಶಕ ಬಾಲಕೃಷ್ಣ ತಿಳಿಸಿದ್ದಾರೆ. ಇನ್ನು, ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಕ್ಕೂ ದೂರು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸಲಹೆ ನೀಡಿದ್ದಾಗಿ ಹೇಳಿದರು.
PublicNext
28/06/2022 10:54 pm