ಬೆಂಗಳೂರು:ಚಿಕ್ಕ ಮಳೆ ಬಂದರೂ ಸಾಕು ಈ ಲೇಔಟ್ ರಸ್ತೆಗಳು ಕೆರೆಯಂತೆ ತುಂಬಿ ಹೋಗುತ್ತವೆ. ಮನೆ ಮುಂದೆ ನಿಲ್ಲಿಸಿದ್ದ ಕಾರು ಬೈಕ್ ನೀರಿನ ಪಾಲಾಗುತ್ತವೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳಿಗೆ ಇಲ್ಲಿನ ನಿವಾಸಿಗಳು ಎಷ್ಟು ಬಾರಿ ತಮ್ಮ ಅಳಲು ಕೋರಿಕೊಂಡರು ಕೂಡ ಪ್ರಯೋಜನವಾಗಿಯೇ ಇಲ್ಲ.
ಹೌದು. ಇದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬಿಳೇಕಹಳ್ಳಿ ಅನುಗ್ರಹ ಬಡಾವಣೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಲೇಔಟ್ ನಲ್ಲಿ ನೀರು ತುಂಬಿದ್ದು, ಬಿಳೇಕಹಳ್ಳಿಯ ಅನುಗ್ರಹ ಲೇಔಟ್ ನಿಂದ ನಮ್ಮ ಪ್ರತಿನಿಧಿ ನವೀನ್ ನೀಡಿರುವ ಸಂಪೂರ್ಣ ವರದಿ ಇಲ್ಲಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
31/07/2022 01:55 pm