ಬೆಂಗಳೂರು: ನೆಲಮಂಗಲದ ಸುಭಾಷ್ ನಗರದ ನಿವಾಸಿಗಳು ಅಕ್ರಮ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಆತಂಕಕ್ಕೀಡಾಗಿದ್ದಾರೆ. ಬ್ಲಾಕ್ ನಲ್ಲಿ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಅಕ್ಕಪಕ್ಕದ ಜನರಿಗೆ ಸಮಸ್ಯೆಯಾಗ್ತಿದೆ. ನಿತ್ಯ ಕಡಿಮೆ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಾ ದಲ್ಲಾಳಿಗಳು ದಂಧೆ ಎಸೆಗುತ್ತಿದ್ದಾರೆ. ದಲ್ಲಾಳಿಗಳ ಉಪಟಳಕ್ಕೆ ಸ್ಥಳೀಯ ನಿವಾಸಿಗಳು ನಲುಗಿ ಹೋಗಿದ್ದಾರೆ.
ಇನ್ನು ಯಾವಾಗ ಸಿಲಿಂಡರ್ ಸ್ಫೋಟವಾಗುತ್ತೋ ಅಂತ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಎಷ್ಟೋ ಬಾರಿ ಸಿಲಿಂಡರ್ ಇಲ್ಲಿ ಡಂಪ್ ಮಾಡದಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ .ಆದ್ರೂ ಇಲ್ಲಿ ಸಿಲಿಂಡರ್ ಡಂಪ್ ಮಾಡ್ತಾ ಜನರಿಗೆ ಇನ್ನಷ್ಟು ಕಿರಿಕಿರಿ ಉಂಟುಮಾಡ್ತಿದ್ದಾರೆ. ಅಷ್ಟೇ ಅಲ್ಲ ದಲ್ಲಾಳಿಗಳು ಪೊಲೀಸರಿಗೆ ಹಣ ಕೊಟ್ಟು ಬಾಯಿ ಮುಚ್ಚಿಸುತ್ತಾರೆ.ಇವರ ಉಪಟಳಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಕ್ಕಪಕ್ಕದಲ್ಲಿ ಮನೆಗಳು, ದೇವಸ್ಥಾನ ಇದ್ದು ಜನರಿಗೆ ಇನ್ನಿಲ್ಲದ ಫಜೀತಿ ಶುರುವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ನೆಲಮಂಗಲ ಸುಭಾಷ್ ನಗರದ 6 ನೇ ಕ್ರಾಸ್ ನಲ್ಲಿ ಈ ಘಟನೆ ನಿತ್ಯ ನಡೆಯುತ್ತೆ. ಈ ದಲ್ಲಾಳಿಗಳ ಹಾವಳಿಯಿಂದ ಜನರಂತೂ ರೋಸಿಹೋಗಿದ್ದಾರೆ.
Kshetra Samachara
28/07/2022 01:25 pm