ಬೆಂಗಳೂರು: ಶಾಲೆ ಅಂದ್ರೇ ಬದುಕನ್ನು ರೂಪಿಸುವ ಸ್ಥಳ. ಆದರೆ ಬೆಂಗಳೂರಿನ ಈ ಶಾಲೆಯಲ್ಲಿ ಆ ವಿದ್ಯಾರ್ಥಿ ಗಲಾಟೆ ಮಾಡ್ತಾನೆ ಅಂತ ಪ್ರಿನ್ಸಿಪಾಲ್ ಅನಾಗರಿಕ ಶಿಕ್ಷೆಯನ್ನ ನೀಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯ ಪೋಷಕರು ಮಕ್ಕಳ ಹಕ್ಕುಗಳ ಆಯೋಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ವಾ: ಆ ಬಾಲಕ ರಾಜಾಜಿನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ ಪಬ್ಲಿಕ್ ಸ್ಕೂಲ್‌ನಲ್ಲಿ ಆರ್‌ಟಿಇ ಅಡಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಆದರೆ ಕಳೆದ 15 ದಿನಗಳಿಂದ ಈ ವಿದ್ಯಾರ್ಥಿಯನ್ನು ಶಾಲಾ ಕೊಠಡಿಯ ಹೊರಗೆ ನಿಲ್ಲಿಸಲಾಗಿತ್ತು. ಯಾಕೆ ಅಂತ ಆ ಬಾಲಕ ಹೇಳ್ತಾನ್ ನೋಡಿ..
ವಾ: ಕಳೆದ 15 ದಿನಗಳಿಂದ ಬಾಲಕ ಯಾಕೆ ಶಾಲೆಯ ಹೊರಗೆ ನಿಂತಿದ್ದಾನೆ ಅಂತ ಯಾರೋ ಮೊಬೈಲ್ ವಿಡಿಯೋ ಮಾಡಿ ಬಾಲಕನ ತಂದೆಗೆ ಕಳಿಹಿಸಿದಾಗ್ಲೇ ಈ ಘಟನೆ ಬೆಳಕಿಗೆ ಬಂದಿದೆ. ನಾಲ್ಕನೆಯ ತರಗತಿ ಓದುತ್ತಿರುವ ಆರ್ ಟಿ ಇ ವಿದ್ಯಾರ್ಥಿಗೆ ಇನ್ನಿಲ್ಲದ ತೊಂದರೆ ಕೊಟ್ಟಿದ್ದಾರೆ ಎಂದು ವಿದ್ಯಾರ್ಥಿ ತಂದೆ ಆರೋಪಿಸಿದ್ದಾರೆ. ನನ್ನ ಮಗ ಆರ್ ಟಿ ಇ ವಿದ್ಯಾರ್ಥಿ ಎನ್ನುವ ಕಾರಣಕ್ಕೆ ಕಿರುಕುಳ ಕೊಡುತ್ತಿದ್ದಾರೆ. ಪಠ್ಯಪುಸ್ತಕ, ನೋಟ್ಸ್, ಡ್ರೆಸ್ ಎಲ್ಲ ಇಲ್ಲೇ ಖರೀದಿಸುವಂತೆ ಒತ್ತಾಯ ಮಾಡ್ತಾರೆ ಎಂದು ದೂರು ನೀಡಿದ್ದಾರೆ.
ದೂರು ಬಂದ ಕೂಡಲೇ ಬಿಇಒ ಶಾಲೆಗೆ ಬೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಯಾವುದೇ ವಿದ್ಯಾರ್ಥಿ ತರಗತಿ ಹೊರಗಡೆ ವಾರಗಟ್ಟಲೆ ಕೂರಿಸುವಂತಿಲ್ಲ ಎಂದು ಪ್ರಿನ್ಸಿಪಾಲ್ ಪ್ರಸನ್ನರನ್ನ ತರಾಟೆಗೆ ತೆಗೆದುಕೊಂಡ್ರು. ಈ ಸಂದರ್ಭದಲ್ಲಿ ಬಿಇಒ ರಮೇಶ್ ಮುಂದೆ ಪ್ರಿನ್ಸಿಪಾಲ್ ಪ್ರಸನ್ನ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.
ಒಟ್ಟಾರೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಾದ ಶಿಕ್ಷಕರೇ ಈ ರೀತಿ ವಿದ್ಯಾರ್ಥಿಗೆ ಅನಾಗರಿಕ ಶಿಕ್ಷೆ ನೀಡಿದ್ದು ಖಂಡನೀಯ. ಈ ಬಗ್ಗೆ ಶಿಕ್ಷಣಾಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕಿದೆ.
ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
02/08/2022 08:26 pm