ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ವಚ್ಚತೆ ಕಾಪಾಡುವಲ್ಲಿ ಪರಪ್ಪನ ಅಗ್ರಹಾರ ಜೈಲು ನಂ1: ಕೇಂದ್ರ ಗೃಹ ಸಚಿವಾಲಯದಿಂದ ಪ್ರಶಂಸೆ

ಬೆಂಗಳೂರು: ಅಕ್ರಮ ಚಟುವಟಿಕೆ ತಾಣ ಎಂದು ಹೆಸರು ಪಡೆದಿದ್ದ ಪರಪ್ಪನ ಅಗ್ರಹಾರ ಜೈಲು ಇದೀಗ ದೇಶದ ಎಲ್ಲಾ ಜೈಲುಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ. ದೇಶದಲ್ಲಿರುವ ಒಟ್ಟು 1319 ಜೈಲುಗಳಿಗೆ ಹೋಲಿಸಿದರೆ ಬೆಂಗಳೂರಿನ ಸೆಂಟ್ರಲ್ ಜೈಲು ಅತಿ ಹೆಚ್ಚು ಶುಚಿತ್ವ ಹೊಂದಿರುವ ಕೀರ್ತಿಗೆ ಪಾತ್ರವಾಗಿದೆ.‌ ಇದಕ್ಕೆ‌ ಪೂರಕವೆಂಬಂತೆ ಕೇಂದ್ರ ಗೃಹ ಸಚಿವಾಲಯವೇ ಅತಿ ಶುಚಿತ್ವದ ಜೈಲು ಎಂದು ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದೆ.

ಪರೋಕ್ಷವಾಗಿ ಜೈಲು ಸಿಬ್ಬಂದಿಯೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಈ ಹಿಂದೆ ಕೇಳಿಬಂದಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಿ ಅಧಿಕಾರಿ ಹಾಗೂ ಸಿಬ್ಬಂದಿ ಎತ್ತಂಗಡಿ ಮಾಡಿಸಿತ್ತು‌. ಅಕ್ರಮ ತಡೆಗಟ್ಟಲು ಜೈಲು‌ ಪ್ರವೇಶದ್ವಾರದ ಬಳಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಹೆಚ್ಚಿನ‌‌ ಸಂಖ್ಯೆಯಲ್ಲಿ ನಿಯೋಜಿಸಿತ್ತು. ಅಲ್ಲದೆ ಜೈಲಿನ ಅವ್ಯವಸ್ಥೆಗಳ ಬಗ್ಗೆ ಸಜಾಬಂಧಿಗಳಿಂದ‌ ದೂರು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಜೈಲಾಧಿಕಾರಿಗಳು ತೆಗೆದುಕೊಂಡ ಕ್ರಮಗಳ ಫಲವಾಗಿ ಪರಪ್ಪನ ಅಗ್ರಹಾರ ಜೈಲು ದೇಶದ ಇತರೆ ಜೈಲುಗಳಿಗಿಂತ ಮೊದಲ ಸ್ಥಾನ ಪಡೆದಿದೆ. ಆಂಧ್ರಪ್ರದೇಶ ವಿಶಾಖಪಟ್ಟಣ ಹಾಗೂ ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹಕ್ಕೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ದೇಶದಲ್ಲೇ ಅತಿ‌‌ ದೊಡ್ಡ ಜೈಲು ಎಂದು ಹೇಳಲಾಗುತ್ತಿದ್ದು ಸದ್ಯ 5200 ಕೈದಿಗಳಿದ್ದಾರೆ. ಸೆಂಟ್ರಲ್ ಜೈಲಿನ ಆಹಾರ ಗುಣಮಟ್ಟ ಹಾಗೂ ಸ್ವಚ್ಚತೆಗಾಗಿ ಕೇಂದ್ರದ ಆಹಾರ ಭದ್ರತೆ ಹಾಗೂ ಸುರಕ್ಷತೆ ಪ್ರಾಧಿಕಾರ ಹಾಗೂ ಆಲ್‌ ಇಂಡಿಯಾ ಅಧಿಕಾರಿಗಳು ಪರಿಶೀಲನೆ ನಡೆಸಿ 4 ಸ್ಟಾರ್ ರೇಟಿಂಗ್ ನೀಡಿ ಪ್ರಮಾಣಿಕರಿಸಿದ್ದಾರೆ. ಕಳೆದ ತಿಂಗಳು ಐವರು ಅಧಿಕಾರಿಗಳು ಕೇಂದ್ರ ಕಾರಾಗೃಹದ ವಿವಿಧ ವಿಭಾಗಗಳಿಗೆ ಬಂದು ಪರಿಶೀಲಿಸಿದ್ದರು. ಜೈಲು ಆಸ್ಪತ್ರೆ, ಕ್ಯಾಂಟಿನ್, ಕೈದಿಗಳು ಕೆಲಸ ಮಾಡುವ ಜಾಗ, ಟಾಯ್ಲೆಟ್, ಬ್ಯಾರಕ್ ಗಳು ಹಾಗೂ ಜೈಲು ಆವರಣದಲ್ಲಿ ನೀಡಿ ಪರಿಶೀಲನೆ‌‌ ನಡೆಸಿದ್ದರು.

14 ಅಂಶಗಳ ಆಧಾರದ‌ ಮೇರೆಗೆ ಸ್ವಚ್ಚ ಜೈಲು‌ ಪ್ರಶಸ್ತಿ ಘೋಷಿಸಲಾಗಿದೆ.

ಜೈಲಿನಲ್ಲಿ ಅಡುಗೆ ತಯಾರು ಹೇಗೆ ? ಅಡುಗೆ ಕೋಣೆ ನಿರ್ವಹಣೆ ಮತ್ತು ಶುದ್ಧತೆ, ಅದರ ಬಗ್ಗೆ ಕೈದಿಗಳ ಜ್ಞಾನ, ಅದರಲ್ಲಿರುವ ವಸ್ತುಗಳು ಮತ್ತು ಆಹಾರ ಪದಾರ್ಥಗಳ ಸರಿಯಾಗಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಶೌಚಾಲಯ, ಸ್ನಾನದ ಗೃಹಗಳು ಸ್ವಚ್ಚತೆ ಕೈದಿಗಳಿಗೆ ತಕ್ಕಂತೆ ಶೌಚಾಲಯ ಇದೆಯೇ? ಆಡಳಿತ ಕೋಣೆ, ಕಡತಗಳ ನಿರ್ವಹಣೆ, ಆಸ್ಪತ್ರೆಗಳ ನಿರ್ವಹಣೆ, ಎಷ್ಟು ಮಂದಿ ವೈದ್ಯರು, ನರ್ಸ್‌ಗಳು ಇದ್ದಾರೆ. ಮೆಡಿಕಲ್ ಸ್ಟೋರ್‌ನಲ್ಲಿ ಎಲ್ಲ ಬಗೆಯ ಮಾತ್ರೆಗಳು ಇವೆಯೇ ಅಲ್ಲಿನ ಸ್ವಚ್ಚತೆ ಹೇಗೆ? ಸೌಲಭ್ಯಗಳು ಹೇಗಿವೆ?

ಜೈವಿಕ ತ್ಯಾಜ್ಯ ಹೇಗೆ ವಿಲೇವಾರಿ ಮಾಡುತ್ತಾರೆ. ಗರ್ಭಿಣಿಯಣಿರಿಗೆ ಯಾವ ಸೌಲಭ್ಯ. ಅವರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಯೆ? ಒಳಚರಂಡಿ, ಕೊಳಚೆ ನೀರಿನ ಶುದ್ಧಿಕರಣ ಘಟಕಗಳು ಇವೆಯೇ? ಕೈದಿಗಳಿಗೆ ಶುದ್ಧ ನೀರು ಕೊಡಲಾಗುತ್ತಿದೆಯೇ? ಜೈಲಿನಲ್ಲಿರುವ ಒಣ ಮತ್ತು ಹಸಿ ಕಸ ನಿರ್ವಹಣೆ ಹೇಗೆ ಎಂಬುದು ಸೇರಿದಂತೆ 14 ಮಾನದಂಡಗಳನ್ನು ಆಯ್ದುಕೊಂಡು ಈ ಪ್ರಶಸ್ತಿ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯ ಡಿಜಿಪಿ ಅಲೋಕ್ ಮೋಹನ್‌, ದೇಶದ ಎಲ್ಲಾ ಜೈಲುಗಳಿಗೆ ಹೋಲಿಸಿದರೆ ಪರಪ್ಪನ ಅಗ್ರಹಾರ ಜೈಲು ಶುಚಿತ್ವ ಹೊಂದಿರುವ ಕಾರಾಗೃಹ ಎಂದು ಕೀರ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

07/09/2022 12:38 pm

Cinque Terre

10.27 K

Cinque Terre

0

ಸಂಬಂಧಿತ ಸುದ್ದಿ