ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖೆ ನಡೆಸಿದ ಪೊಲೀಸರಿಗೆ ಸಲ್ಲುವ ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಗಿದ್ದಾರೆ. ಪ್ರತಿವರ್ಷ ನೀಡುವ ಈ ಉನ್ನತ ಪದಕಕ್ಕೆ ದೇಶದ ಎಲ್ಲಾ ರಾಜ್ಯಗಳಿಂದ ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನ ಆಯ್ಕೆ ಮಾಡಲಾಗುತ್ತೆ. ಸದ್ಯ ಈ ವರ್ಷ ದೇಶದಾದ್ಯಂತ ಸಿವಿಲ್ ಪೊಲೀಸ್ ಸಿಬಿಐ, ಎನ್‌ಸಿಬಿ ಸೇರಿ 151 ಅಧಿಕಾರಿಗಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇನ್ನೂ ಕರ್ನಾಟಕದಿಂದ ಆರು ಅಧಿಕಾರಿಗಳು ಆಯ್ಕೆಯಾಗಿದ್ದು. ಎಸ್‌ಪಿ ಲಕ್ಷ್ಮೀ ಗಣೇಶ್, ಡಿವೈಎಎಸ್‌ಪಿ ವೆಂಕಟಪ್ಪ, ರಾಜೇಂದ್ರ, ಶಂಕರ್ ಕಲ್ಲಪ್ಪ ಮತ್ತು ಶಂಕರ ಗೌಡ ಹಾಗೂ ಸಿಪಿಐ ಗುರುಬಸವರಾಜು ಆಯ್ಕೆಯಾಗಿದ್ದಾರೆ.
ಇನ್ನೂ ಅತ್ಯುತ್ತಮ ತನಿಖೆಗೆ ನಡೆಸಿದ ಅಧಿಕಾರಿಗಳನ್ನ ಮಾತ್ರ ಈ ಪದಕ್ಕೆ ಆಯ್ಕೆ ಮಾಡಲಾಗಿದ್ದು. ಎಸ್‌ಪಿ ಲಕ್ಷ್ಮೀ ಗಣೇಶ ಈ ಹಿಂದೆ ಬೆಂಗಳೂರು ಗ್ರಾಮಾಂತ ಹೆಚ್ಚುವರಿ ವರಿಷ್ಠಾಧಿಕಾರಿಯಾಗಿದ್ದ ಮೊದಲ ಬಾರಿಗೆ ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿಯ ಸುಮಾರು ಎರಡು ಕೋಟಿ ಆಸ್ತಿಯನ್ನ ಫ್ರೀಜ್ ಮಾಡಿಸಿದ್ರು. ಇದಕ್ಕೂ ಮೊದಲೂ ರಾಮನಗರ ಜಿಲ್ಲೆಯಲ್ಲಿ ಮೂರು ಕೊಲೆ ಜೊತೆಗೆ ರೇಪ್ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗೆ ಮರಣದಂಡನೆ ಆಗುವಂತೆ ಕೇಸ್ ಸಾಕ್ಷ್ಯ ಕಲೆ ಹಾಕಿ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಸಿದ್ರು. ಇದ್ರ ಜೊತೆಗೆ ಇನ್ನೂ ಅನೇಕ ನಿಷ್ಪಕ್ಷಪಾತ ತನಿಖೆಗಾಗಿ ಕೇಂದ್ರ ಸರ್ಕಾರ ನೀಡುವ ಈ ಗೌರವವನ್ನ ಲಕ್ಷ್ಮೀ ಗಣೇಶ್ ತಮ್ಮದಾಗಿಸಿಕೊಂಡಿದ್ದಾರೆ.
PublicNext
12/08/2022 03:50 pm