ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 50 ಕೋಟಿ ಮೌಲ್ಯದ ಒತ್ತುವರಿ ನಿವೇಶನ ಮತ್ತೆ ಬಿಬಿಎಂಪಿ‌ ಸುಪರ್ದಿಗೆ

ಬೆಂಗಳೂರು: ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದ 50 ಕೋಟಿ ಮೌಲ್ಯದ ನಿವೇಶನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತೆ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಗಾಂಧಿಬಜಾರ್​ನ ವಿದ್ಯಾರ್ಥಿ ಭವನ ಸಮೀಪ ಇರುವ ಈ ಜಾಗದ ಮೌಲ್ಯವು ₹ 50 ಕೋಟಿ ಎಂದು ಅಂದಾಜಿಸಲಾಗಿದೆ. ಇಬ್ಬರು ಖಾಸಗಿ ವ್ಯಕ್ತಿಗಳು 9,000 ಚದರ ಮೀಟರ್​ನಷ್ಟಿರುವ ಈ ಜಮೀನನ್ನು ಹಲವು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದರು. ಇದೀಗ ಬಿಬಿಎಂಪಿ ಒತ್ತುವರಿ ತೆರವುಗೊಳಿಸಿ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಸುಬ್ರಹ್ಮಣ್ಯಪುರ ಕೆರೆ, ಬೇಗೂರು ಕೆರೆ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿ ಕೆರೆ ಒತ್ತುವರಿ ತೆರವು ವಿಳಂಬಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಕಳೆದ 6 ತಿಂಗಳಿನಿಂದ ಒಂದೇ ಒಂದು ಒತ್ತುವರಿ ತೆರವುಗೊಳಿಸಿಲ್ಲ. ಬೆಂಗಳೂರಿನ ಕೆರೆಗಳನ್ನು ಭವಿಷ್ಯದ ಜನರಿಗಾಗಿ ರಕ್ಷಿಸಬೇಕು. ತಹಶೀಲ್ದಾರ್‌ಗಳು ಒತ್ತುವರಿ ತೆರವಿಗೆ ಸಹಕರಿಸಬೇಕು ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

10 ದಿನಗಳಲ್ಲಿ ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು. ಸರ್ವೆ ಕಾರ್ಯಕ್ಕೆ ಅಧಿಕಾರಿಗಳನ್ನು ನಿಯೋಜಿಸಬೇಕು. ಅದಾದ 1 ವಾರದಲ್ಲಿ ಒತ್ತುವರಿದಾರರಿಗೆ ನೋಟಿಸ್ ನೀಡಬೇಕು. ನಂತರದ ಒಂದು ವಾರದಲ್ಲಿ ಒತ್ತುವರಿ ತೆರವುಗೊಳಿಸಬೇಕು. ಅಗತ್ಯ ಸಿಬ್ಬಂದಿ, ಪೊಲೀಸ್ ಭದ್ರತೆ ಒದಗಿಸುವಂತೆ ಕೆರೆ ಸುತ್ತ ರಸ್ತೆ ಅಗಲೀಕರಣಗೊಳಿಸದಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Edited By : Nagesh Gaonkar
PublicNext

PublicNext

23/07/2022 08:02 am

Cinque Terre

31.21 K

Cinque Terre

0

ಸಂಬಂಧಿತ ಸುದ್ದಿ