ನೆಲಮಂಗಲ: ಜಮೀನು ವ್ಯಾಜ್ಯದ ವಿಚಾರವಾಗಿ ತನ್ನ ಪತ್ನಿ ಮೇಲೆ ಹಲ್ಲೆ ನಡೆದಿದೆ ಎಂದು ವ್ಯಕ್ತಿಯೋರ್ವ ಠಾಣೆಗೆ ದೂರು ನೀಡಲು ಹೋದ ವೇಳೆ, FIR ದಾಖಲಿಸಲು ಪೊಲೀಸ್ರು ಹಿಂದೇಟು ಹಾಕಿದ ಆರೋಪದಲ್ಲಿ ಠಾಣೆಯಲ್ಲಿ ಆ ವ್ಯಕ್ತಿ ಪೊಲೀಸರೆದುರೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದ್ದು, ತಾಲೂಕಿನ ಟಿ.ಬೇಗೂರು ಗ್ರಾಮದ ನಿವಾಸಿ ಶ್ರೀನಿವಾಸ ಮೂರ್ತಿ ಎಂಬವರ ಪತ್ನಿಗೆ ಆತನ ಸೋದರರು ತಮ್ಮ ಆಸ್ತಿ ವಿಚಾರವಾಗಿ ಥಳಿಸಿದ್ರು ಎಂದು ನೆಲಮಂಗಲ ಗ್ರಾಮಾಂತರ ಠಾಣೆಗೆ ದೂರು ನೀಡಲು ಮುಂದಾಗಿದ್ರು.
ಆದ್ರೆ, ಪೊಲೀಸ್ರು FIR ದಾಖಲಿಸದೆ NCR ಮಾಡುತ್ತೇವೆಂದು ಹೇಳಿದ್ದಕ್ಕೆ ಶ್ರೀನಿವಾಸಮೂರ್ತಿ ಗ್ರಾಮಾಂತರ ಠಾಣಾ ಪೊಲೀಸರ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆತನನ್ನು ತಡೆದು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇತ್ತ ಶ್ರೀನಿವಾಸ್ ಮೂರ್ತಿ ಆತ್ಮಹತ್ಯೆಗೆ ಯತ್ನಿಸಿದ ತಕ್ಷಣವೇ FIR ದಾಖಲಿಸಲಾಗಿದೆ ಎನ್ನಲಾಗುತ್ತಿದ್ದು, ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಶ್ರೀನಿವಾಸ್ ಮೂರ್ತಿ ಚೇತರಿಸಿಕೊಂಡಿದ್ದಾರೆ.
Kshetra Samachara
29/06/2022 10:33 pm