ಬೆಂಗಳೂರು : ರಸ್ತೆ ಅಪಘಾತ, ಗೈರು, ಅಶಿಸ್ತಿನ ನಡೆ ಸೇರಿದಂತೆ ವಿವಿಧ ಕಾರಣಗಳಿಂದ ಸಿಬ್ಬಂದಿಯ ವಿರುದ್ಧ ದಾಖಲಾಗಿದ್ದ 7200 ಪ್ರಕರಣವನ್ನು ಏಕಕಾಲಕ್ಕೆ ಕೆಎಸ್ ಆರ್ ಟಿಸಿ ಹಿಂಪಡೆದಿದೆ. ಸುಮಾರು25 ಸಾವಿರ ರೂ ದಂಡ ವಿಧಿಸಬಹುದಾದ ಪ್ರಕರಣಗಳಲ್ಲಿ ಕೇವಲ 10 ರೂ ನಿಂದ 500 ರೂ ವರೆಗೆ ಮಾತ್ರದ ದಂಡ ಹಾಕ ಲಾಗಿದ್ದು, ಒಟ್ಟು 7200 ಪ್ರಕರಣ ಗಳನ್ನು ಇತ್ಯರ್ಥ ಪಡಿಸಲಾಗಿದೆ.
ಎಲ್ಲಾ ಸಿಬ್ಬಂದಿಯ ವಿರುದ್ದ ದಾಖಲಾದ ಶಿಸ್ತುಕ್ರಮ ಹಿಂಪಡೆ ಯಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನಾವಳಿಗಳು ಮರುಕಳಿಸದಂತೆ ನೋಡಿ ಕೊಳ್ಳಬೇಕೆಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಕೆಎಸ್ ಆರ್ ಟಿಸಿ ನಿಗಮದಲ್ಲಿ ಒಟ್ಟು 35 ಸಾವಿರ ಸಿಬ್ಬಂದಿ ಪೈಕಿ 8,414 ಸಿಬ್ಬಂದಿಗಳ ವಿರುದ್ಧ ಶಿಸ್ತು ಪ್ರಕರಣಗಳು ಇದ್ದವು. ಪ್ರಕರಣ ಹಿಂಪಡೆದ ಹಿನ್ನೆಲೆಯಲ್ಲಿ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗ ಬಹುದು ಎಂದು ಅನ್ಬು ಕುಮಾರ್ ತಿಳಿಸಿದ್ದಾರೆ.
Kshetra Samachara
02/05/2022 05:50 pm