ಯಲಹಂಕ: ಬೆಂಗಳೂರು ಉತ್ತರ ಭಾಗಕ್ಕೆ ಇಂಟರ್ ನೇಶನಲ್ ಏರ್ ಪೋರ್ಟ್ ಬಂದಿದ್ದೇ ತಡ, ಇಲ್ಲಿನ ಜಮೀನಿಗೆ ಚಿನ್ನದ ಬೆಲೆ! ಆದ್ದರಿಂದ ಏರ್ ಪೋರ್ಟ್ ಹಾಗೂ ಬೆಂಗಳೂರಿನ ಸಂಪರ್ಕ ಕೊಂಡಿಯಾದ ಯಲಹಂಕ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳ ಮೇಲೆ ಕೆಲವರ ವಕ್ರದೃಷ್ಟಿ ಬಿದ್ದಿದೆ.
ಸದ್ಯ ಯಲಹಂಕ ತಾಲೂಕಿನ ವಡೇರಹಳ್ಳಿ ಗ್ರಾಮದ ಸ.ನಂ. 8ರಲ್ಲಿ ಒಂದು ಎಕರೆ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಲಾಗಿತ್ತು. ಇದೀಗ ಯಲಹಂಕ ತಹಶೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾಡಳಿತದ ಆದೇಶದಂತೆ ಒತ್ತುವರಿ ತೆರವುಗೊಳಿಸಿದ್ದಾರೆ.
ವಡೇರಹಳ್ಳಿಯ ಈ ಒತ್ತುವರಿ ಜಮೀನಿನ ಸದ್ಯದ ಸರ್ಕಾರಿ ಬೆಲೆ 8 ಕೋಟಿ. ಆದರೆ, ಮಾರ್ಕೆಟ್ ನಲ್ಲಿ 15ರಿಂದ 17 ಕೋಟಿವರೆಗೂ ಬೆಲೆ ಇದೆ! ಈ 38 ಗುಂಟೆ ಜಮೀನಿನ ಒತ್ತುವರಿ ಬಗ್ಗೆ ಬೆಂಗಳೂರು ನಗರ ಜಿಲ್ಲಾಡಳಿತ ಒತ್ತುವರಿ ತೆರವುಗೊಳಿಸಲು ಆದೇಶಿಸಿತ್ತು. ತಹಶೀಲ್ದಾರ್ ನರಸಿಂಹಮೂರ್ತಿ ತಂಡ ವಡೇರಹಳ್ಳಿಯ ಪ್ರಸಾದ್ ಆಸ್ಪತ್ರೆಯ 2 ಗುಂಟೆ, ಬಾರ್ & ರೆಸ್ಟೋರೆಂಟ್ ನ 2 ಗುಂಟೆ, ವೆಂಕಟೇಶ್ ಎಂಬಾತ ಒತ್ತುವರಿ ಮಾಡಿಕೊಂಡಿದ್ದ 7 ಗುಂಟೆ ಜಮೀನಿನ ಒತ್ತುವರಿ ತೆರವುಗೊಳಿಸಲಾಯ್ತು.
ತಹಶೀಲ್ದಾರ್ ನರಸಿಂಹಮೂರ್ತಿ ತಂಡ ಸರ್ವೆ ಅಧಿಕಾರಿಗಳ ಸಮ್ಮುಖದಲ್ಲಿ JCB ಜೊತೆ ತೆರಳಿ ಒತ್ತುವರಿ ತೆರವುಗೊಳಿಸಿತು. ಈಗಾಗಲೇ ನೋಟಿಸ್ ಕೊಟ್ಟಿದ್ದರಿಂದ ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಾಗಿಲ್ಲ. ಮತ್ತೆ ಏ. 29ರಂದು ಇದೇ ಪ್ರಕರಣದ ಬಗ್ಗೆ ತಹಶೀಲ್ದಾರ್ ಸಮ್ಮುಖದಲ್ಲಿ ಮೀಟಿಂಗ್ ನಡೆಯಲಿದೆ. ಅಂತೂ ಕೋಟ್ಯಾಂತರ ರೂ. ಮೌಲ್ಯದ ಸರ್ಕಾರಿ ಗೋಮಾಳ ಜಾಗ ಜನತೆಯ ಶಾಲೆ, ಪಾರ್ಕ್, ಆಟದ ಮೈದಾನಕ್ಕೆ ಸಿಗುವಂತಾಗಿದೆ.
Kshetra Samachara
26/04/2022 11:37 am