ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ರ ಒತ್ತಡ ನಿವಾರಣೆಗೆ 'ಆರ್ಟ್ ಆಫ್ ಲಿವಿಂಗ್' ವಿಶೇಷ ಕಾರ್ಯಾಗಾರ

ಬೆಂಗಳೂರು: ಸದಾ ಒತ್ತಡದಲ್ಲಿ ಕೆಲಸ ಮಾಡೋ ಪೊಲೀಸ್ರು ಒಂದೆಡೆ ಸೇರಿ ಯೋಗ, ಆಟ ಮತ್ತು ಧ್ಯಾನದಲ್ಲಿ ತೊಡಗಿದ್ದಾರೆ. ಕೆಲಸದೊತ್ತಡದಲ್ಲಿ ಅನೇಕ ಮಾನಸಿಕ ಒತ್ತಡಕ್ಕೊಳಗಾಗಿರೋ ಪೊಲೀಸ್ರಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶೇಷ ಕಾರ್ಯಾಗಾರ ನಡೆಯುತ್ತಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ರಿಗೆ ದಿನಕ್ಕೆ ಮೂರು ಗಂಟೆಯಂತೆ ಐದು ದಿನಗಳ ಕಾರ್ಯಾಗಾರ ನಡೆಸ್ತಿದ್ದು, ದೊಡ್ಡಬಳ್ಳಾಪುರ ಉಪವಿಭಾಗದ ನೂರಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ರು.

ಕೆಲಸದೊತ್ತಡವನ್ನು ಹೇಗೆ ನಿಭಾಯಿಸಬೇಕು, ಮಾನಸಿಕವಾಗಿ ಯಾವ ರೀತಿ ಸದೃಢವಾಗಬೇಕು ಎಂದು ಕಾರ್ಯಾಗಾರದಲ್ಲಿ ಹೇಳಿ ಕೊಡ್ತಿದ್ದಾರೆ.

ಐದು ದಿನದ ಕಾರ್ಯಾಗಾರದಲ್ಲಿ ಪೊಲೀಸ್ರು ಖಾಕಿ ಬಿಟ್ಟು, ಠಾಣೆಯ ಟೆನ್ಷನ್ ಮರೆತು ಖುಷಿ ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಈ ಬಗ್ಗೆ ಖುದ್ದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ‌ಈ ಕಾರ್ಯಾಗಾರ ನಡೆಸಲಾಗುವುದು ಎಂದರು.

Edited By :
PublicNext

PublicNext

28/03/2022 10:17 pm

Cinque Terre

37.52 K

Cinque Terre

0

ಸಂಬಂಧಿತ ಸುದ್ದಿ