ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಕಲಿ ಕ್ರಯಪತ್ರ ತಯಾರಿಕೆ ಬಿಡಿಎ ಅಧಿಕಾರಿಗಳ ವಿರುದ್ಧ ಎಫ್ ಐ ಆರ್

ವರದಿ - ಗಣೇಶ್ ಹೆಗಡೆ

ಬೆಂಗಳೂರು : ಬಿಡಿಎ ನಲ್ಲಿ ಅಕ್ರಮವೆಸಗಿದ ಸುಮಾರು 8 ಜನರ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬಿಡಿಎ ಉಪ ಕಾರ್ಯದರ್ಶಿ 3 ಅನಿಲ್ ಕುಮಾರ್, ಬಿಡಿಎ ಉಪ ಕಾರ್ಯದರ್ಶಿ 4 ಎಸ್ ಎಮ್ ಮಂಗಳಾ, ಅನೀಲ್ ಕುಮಾರ್ ಸೇರಿ, ನಕಲಿ ಫಲಾನುಭವಿಗಳಾದ ಅಪ್ಪಯ್ಯಣ್ಣ, ಶ್ರೀನಿವಾಸರೆಡ್ಡಿ, ಕಮರುನ್ನೀಸಾ, ರುಕ್ಮಿಣಿ, ರಾಜೇಂದ್ರ, ಗುಲಾಬ್ ಜಾನ್, ಶಶಿಕುಮಾರ್, ಬಿಡಿಎ ಕೇಸ್ ವರ್ಕರ್ ವೆಂಕಟರಮಣಪ್ಪ, ಸಂಜಯ್ ಕುಮಾರ್, ಕಮಲಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಬಿಡಿಎ ಜಾಗಕ್ಕೆ ಬೋಗಸ್ ದಾಖಲೆ ಸೃಷ್ಟಿಸುತ್ತಿದ್ದರು. ಗುತ್ತಿಗೆ, ಮಾರಾಟ ಒಪ್ಪಂದದ ನಕಲಿ ಪ್ರತಿಗಳು ಸೃಷ್ಟಿ ಮಾಡುತ್ತಿದ್ದರು. ನಂತರ ಅದೇ ನಕಲಿ ದಾಖಲೆ ಇಟ್ಟುಕೊಂಡು ಕ್ರಯಪತ್ರವನ್ನು ತಯಾರಿಸುತ್ತಿದ್ದರು.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

Edited By : Manjunath H D
PublicNext

PublicNext

25/01/2022 05:32 pm

Cinque Terre

27.28 K

Cinque Terre

0

ಸಂಬಂಧಿತ ಸುದ್ದಿ