ಬೆಂಗಳೂರು: ಇಷ್ಟು ದಿನ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಮಾತ್ರ ದಂಡ ಬೀಳ್ತಾ ಇತ್ತು. ಆದ್ರೆ, ಇನ್ಮುಂದೆ ಎಲ್ಲೆಂದ್ರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ದಂಡ ಬೀಳುವ ಸಾಧ್ಯತೆ ಇದೆ. ಸಂಚಾರಿ ಪೊಲೀಸ್ರು ಸದ್ಯ ಇಂತಹದೊಂದು ಪ್ಲಾನ್ ರೆಡಿ ಮಾಡಿದ್ದಾರಂತೆ. ಜೀಬ್ರಾ ಕ್ರಾಸ್ ಬಿಟ್ಟು ಬೇಕಾಬಿಟ್ಟಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೆ ಈ ದಂಡಾಸ್ತ್ರದ ಬಿಸಿ ತಟ್ಟುತ್ತೆ.
ಕಳೆದ ವರ್ಷ ಜೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ರಸ್ತೆ ದಾಟುತ್ತಿದ್ದ 69 ಪಾದಚಾರಿಗಳು ಅಪಘಾತಗಳಿಗೆ ಬಲಿಯಾಗಿದ್ದಾರೆ! ಹೀಗಾಗಿ ಸಂಚಾರಿ ಪೊಲೀಸ್ರು ಜೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೂ ಫೈನ್ ಹಾಕಲು ಯೋಜನೆ ರೆಡಿ ಮಾಡಿದ್ದಾರೆ. ಆದ್ರೆ, ಬೆಂಗಳೂರಿನ ಎಷ್ಟೋ ರಸ್ತೆಗಳಲ್ಲಿ ಸರಿಯಾದ ಜೀಬ್ರಾ ಕ್ರಾಸಿಂಗ್ ವ್ಯವಸ್ಥೆಯೇ ಇಲ್ಲ. ಪಾದಚಾರಿ ಮಾರ್ಗಗಳೂ ಸರಿಯಾಗಿಲ್ಲ. ಹೀಗಿರುವಾಗ ಪಾದಚಾರಿಗಳಿಗೆ ಫೈನ್ ಹಾಕುವ ಕಾರ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದು ಪ್ರಶ್ನೆಯಾಗಿದೆ.
ಇನ್ನು, ಮೊದಲು ಈ ಬಗ್ಗೆ ಅರಿವು ಮೂಡಿಸಿ ನಂತರ ದಂಡಾಸ್ತ್ರ ಪ್ರಯೋಗಿಸಲು ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.
PublicNext
24/01/2022 03:11 pm