ನಗರಸಭೆ ಅಧಿಕಾರಿ, ಸಿಬ್ಬಂದಿ ವರ್ಗ ಸರಿಯಾದ ಸಮಯಕ್ಕೆ ಕಛೇರಿಗೆ ಆಗಮಿಸಿಲ್ಲ. ಮಾಡಬೇಕಾದ ಎಲ್ಲ ಕೆಲಸ ಬಿಟ್ಟು ನಗರಸಭೆ ಕಛೇರಿಗೆ ಬಂದ ಜನರಿಗೆ ಅವರ ಕೆಲಸ ಆಗುತ್ತಿಲ್ಲ ಎಂಬ ವಿಚಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೆ ಕಛೇರಿ ಆಚೆ ಈಚೆ ಖಾತೆ ಕಂದಾಯದ ದಾಖಲೆ ಪತ್ರಕ್ಕೆ ಅಧಿಕಾರಿಗಳ ಬಳಿ ಸಹಿ ಹಾಕಿಸಿಕೊಳ್ಳಬೇಕು. ಕಂದಾಯ ಕಟ್ಟಬೇಕು. ಜನನ ಪ್ರಮಾಣ ಪತ್ರ, ಮರಣ ಪತ್ರ ಪಡೀಬೇಕು ಅಂತ ಓಡಾಡ್ತಿರೋ ಜನ. ಇನ್ನೊಂದೆಡೆ ಕಛೇರಿ ಸಮಯಕ್ಕೆ ಹಾಜರಾಗದ ಅಧಿಕಾರಿ, ಸಿಬ್ಬಂದಿ ವರ್ಗ. ಮತ್ತೊಂದೆಡೆ ಖಾಲಿ ಖುರ್ಚಿ, ಅಧಿಕಾರಿ, ಸಿಬ್ಬಂದಿಗಳು ಇಲ್ಲದಿದ್ರೂ ನಿರಂತರವಾಗಿ ಆನ್ ಆದ ಲೈಟ್, ತಿರುಗುತ್ತಿರೋ ಫ್ಯಾನ್, ಅಧಿಕಾರಿಗಳು ಯಾಕಿಲ್ಲ ಅಂತ ಕೂಗಾಡ್ತಿರೋ ಸಾರ್ವಜನಿಕರು. ಈ ಎಲ್ಲ ದೃಶ್ಯಗಳು ಕಂಡು ಬಂದದ್ದು, ನೆಲಮಂಗಲದ ನಗರಸಭೆ ಕಾರ್ಯಾಲಯದಲ್ಲಿ.
ಹೌದು ಸರ್ಕಾರಿ ಇಲಾಖೆ ಕೆಲಸ ಅಂದ್ರೇನೆ ಹಾಗೆ ಹಾಗೋ ಹೀಗೋ ಪಿಯುಸಿ, ಡಿಗ್ರಿ ಮುಗಿಸಿ ಸರ್ಕಾರಿ ಇಲಾಖೆಗೆ ಸಂಬಂಧ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿ ಕೊಂಡ್ರೆ ಸಾಕಪ್ಪ ಲೈಪ್ ಸೇಫ್, ಟೇಬಲ್ ಮೇಲೆ, ಕೆಳಗೆ ಹಣ, ರಿಟೈರ್ಡ್ ಆದ್ರೂ ಹಣ ಯಾರಿಗುಂಟು ಯಾರಿಗಿಲ್ಲ. ಜೊತೆಗೆ ಅರ್ಧ ದಿನ ಕೆಲಸ ಮಾಡಿ ಟೈಮ್ ಪಾಸ್ ಮಾಡಿ ಬಿಟ್ರೆ ತಿಂಗಳ ಸರ್ಕಾರಿ ಸಂಬಳ ನಿರಾಳವಾಗಿ ಜೇಬಿಗೆ ಇಳಿಯುತ್ತೆ ಎನ್ನುವ ಲೆಕ್ಕಾಚಾರ.
ಇದಕ್ಕೆ ನಿದರ್ಶನವೆಂಬಂತೆ ನೆಲಮಂಗಲ ನಗರಸಭೆ ಅಧಿಕಾರಿ, ಸಿಬ್ಬಂದಿ ವರ್ಗ ಬೆಳಿಗ್ಗೆ 11 ಗಂಟೆಯಾದ್ರು ಕಛೇರಿ ಕೆಲಸಕ್ಕೆ ಸರಿಯಾಗಿ ಹಾಜರಾಗಲ್ಲ. ಕಂದಾಯದ ಟ್ಯಾಕ್ಸ್ ಕಟ್ಟಬೇಕು ಅಂತ ಕೆಲಸಕ್ಕೆ ಅರ್ಧ ದಿನ ರಜೆ ಹಾಕಿ ಬಂದಿದ್ದೇನೆ. ಬಂದು ಒಂದು ಗಂಟೆ ಕಳೆದ್ರು ಇದುವರೆಗೆ ಪೌರಾಯುಕ್ತ ಅಧಿಕಾರಿಗಳು, ಕೆಲ ಆರ್ಓ ಅಧಿಕಾರಿ, ಬಿಲ್ ಕಲೆಕ್ಟರ್, ಇಂಜಿನಿಯರ್ ಸಿಬ್ಬಂದಿ ವರ್ಗ ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ ಎಂದು ದೂರಿದ್ದಾರೆ..
ಇನ್ನೂ ಏಕೆ ಅಧಿಕಾರಿಗಳು ಇನ್ನೂ ಬಂದಿಲ್ಲ ಅಂತ ಕೆಲ ಅಧಿಕಾರಿಗಳ ಬಳಿ ಪ್ರಶ್ನಿಸಿದ್ರೆ ಡಿಸಿ ಕಛೇರಿ ಮೀಟಿಂಗ್‌ಗೆ ಹೋಗಿದ್ದಾರೆ, ಸಿಬ್ಬಂದಿ ವರ್ಗದ ಮನೆಯ ಕಾರ್ಯಕ್ರಮ ಇದೆ ಎಂದು ಸಬೂಬು ಹೇಳ್ತಾರೆ ಅಂತ ಸಾರ್ವಜನಿಕರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಹಲವು ಬಾರಿ ಲಿಖಿತ ರೂಪದಲ್ಲಿ ಈ ಬಗ್ಗೆ ಮನವಿ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಅಧಿಕಾರಿಗಳ ಮೇಲೆ ಆಕ್ರೋಶಿತರಾಗಿದ್ದಾರೆ.
Kshetra Samachara
28/05/2022 12:11 pm