ಮಸೀದಿ ಮತ್ತು ಮಂದಿರದಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸುಮಾರು 959 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ಪೈಕಿ 121 ಅರ್ಜಿದಾರರಿಗೆ ಕಾನೂನಿನ ಅಡಿಯಲ್ಲಿ ಅನುಮತಿ ನೀಡಿದ್ದು, ಉಳಿದಂತೆ ಅರ್ಜಿಗಳ ಪರಿಶೀಲನೆ ಆಗ್ತಿದೆ. ಎಸಿಪಿ , ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅರ್ಜಿ ಕುರಿತು ವಿಚಾರಣೆ ನಡೆಸಿದ ನಂತರ ವಿಲೇವಾರಿ ಮಾಡಲಾಗುವುದು ಎಂದು ಕಮಿಷನರ್ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ರೆಡ್ಡಿ ಈದ್ಗಾ ಮೈದಾನದಲ್ಲಿ ಸಭೆ ಸಮಾರಂಭಕ್ಕೆ ಅನುಮತಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಸದ್ಯ ಇದುವರೆಗೂ ಯಾರೂ ಅನುಮತಿ ಕೋರಿ ಅರ್ಜಿ ಕೊಟ್ಟಿಲ್ಲ, ಅರ್ಜಿ ಕೊಟ್ಟರೆ ಕಾನೂನು ರೀತಿ ಏನೆಲ್ಲ ಮಾಡಬೇಕೋ ಅದನ್ನ ಮಾಡುವುದಾಗಿ ತಿಳಿಸಿದ್ದಾರೆ.
PublicNext
07/06/2022 12:23 pm