ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆಯ ನಿಯಮವನ್ನು ಮೀರಿರುವುದಕ್ಕೆ ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ಕೊಡಲಾಗಿದೆ. ಈ ಹಿನ್ನಲೆ ಮಸೀದಿಗಳಲ್ಲೇ ಹೆಚ್ಚು ರೂಲ್ಸ್ ಬ್ರೇಕ್ ಆಗಿರೋದ್ರಿಂದ ಈ ವರೆಗೂ ಒಟ್ಟು 125 ಮಸೀದಿಗಳಿಗೆ ನೋಟೀಸ್ ನೀಡಲಾಗಿದೆ.
ರಾಜ್ಯದಲ್ಲಿ ಸದ್ಯ ಮಸೀದಿಗಳ ಮೇಲೆ ಅಳವಡಿಸಿರುವ ಲೌಡ್ ಸ್ಪೀಕರ್ ತೆರವಿಗೆ ಆಗ್ರಹ ಜೋರಾಗಿದೆ. ಪೈಗಂಬರ್ ಕಾಲದಲ್ಲಿ ಮೈಕ್ ಇರಲಿಲ್ಲವೆಂದು ಮೈಕ್ ಬ್ಯಾನ್ ಪರ ಸಿ.ಟಿ. ರವಿಯವ್ರು ಮಾತನಾಡಿದ್ದರು.
ವಿಶ್ವ ಹಿಂದೂ ಪರಿಷತ್‌ನ ಗಿರೀಶ್ ಭಾರದ್ವಾಜ್ ಎಲ್ಲಾ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳನ್ನ ನಿಷೇಧಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ವೇಳೆ ಹೈಕೋರ್ಟ್ ಕೇಳಿದ ಮಾಹಿತಿಯನ್ನ ಪೊಲೀಸ್ ಇಲಾಖೆ ಒದಗಿಸಿದೆ. ಈ ದಾಖಲೆಗಳಲ್ಲಿ ಬೆಂಗಳೂರಿನ ಏಳು ವಲಯಗಳಲ್ಲಿ ಪೊಲೀಸರು ಬಾರ್ ಅಂಡ್ ರೆಸ್ಟೊರೆಂಟ್, ಪಬ್, ಕ್ಲಬ್, ಕೈಗಾರಿಕೆಗಳು, ಮಸೀದಿ, ದೇವಾಲಯ, ಚರ್ಚ್‌ಗಳಿಗೆ ಎಷ್ಟು ನೋಟಿಸ್ ನೀಡಿದ್ದಾರೆ ಎಂಬುದನ್ನ ಕೋರ್ಟ್‌ಗೆ ತಿಳಿಸಲಾಗಿದೆ.
PublicNext
05/04/2022 05:50 pm