ಬೆಂಗಳೂರು ದಕ್ಷಿಣ : ನಿತ್ಯಾನಂದ ಶಾಲೆಯಲ್ಲಿ ಹಿಜಾಬ್ ತೆಗೆಸಿದಕ್ಕೆ ಇಂದು 11 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹೌದು ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ನಿತ್ಯಾನಂದ ಶಾಲೆಯಲ್ಲಿ ಇದೇ 28 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ಸಕಲವಾರ ಗ್ರಾಮದ ಎಂ ಎಸ್ ಬಿ ಪ್ರೌಢ ಶಾಲೆಯ 11 ಜನ ವಿದ್ಯಾರ್ಥಿಗಳು ಪರೀಕ್ಷೆ ಗೆ ಹಿಜಾಬ್ ಧರಿಸಿ ಬಂದಿದ್ದರು.
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ಗೇಟ್ ನಲ್ಲಿ ನಿಲ್ಲಿಸಿ ಹಿಜಾಬ್ ತೆಗೆಸಿ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಇಂದು ಆ 11 ಜನ ಮಕ್ಕಳು ಪರೀಕ್ಷೆ ಗೈರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹರಾಜು ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಮನವೊಲಿಕೆಯ ಪ್ರಯತ್ನ ಮಾಡಿದ್ರು ಮಕ್ಕಳು ಪರೀಕ್ಷೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
PublicNext
30/03/2022 01:51 pm