ಬೆಂಗಳೂರು - ರಾಜಧಾನಿ ಬೆಂಗಳೂರಲ್ಲಿ ಖಾಸಗಿ ಶಾಲೆಗೆ ಬಿಸಿ ಮುಟ್ಟಿಸಲು ಮಕ್ಕಳ ಹಕ್ಕು ಆಯೋಗ ಮುಂದಾಗಿದೆ. ಶುಲ್ಕದ ವಿಚಾರದಲ್ಲಿ ಕಿರುಕುಳ ಕೊಡುತ್ತಿರುವ ಶಾಲೆಗಳ ಮೇಲೆ ಕ್ರಮಕ್ಕೆ ಮುಂದಾಗಿದೆ.ಬಾಲ್ಡ್ ವಿನ್ ಕೋ ಎಜುಕೇಶನ್, ಪ್ರೆಸಿಡೆನ್ಸಿ ಶಾಲೆ, ನಾರಾಯಣ ಒಲಂಪಿಯಡ್ ಸೌಂದರ್ಯ ಶಾಲೆ, ಸಂತ ಜರ್ಮನ್ ಅಕಾಡೆಮಿ ಶಾಲೆಗಳ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಪೋಷಕರಿಂದ ಶಾಲೆಗಳ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಬಂದಿತ್ತು. ಆ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿದ್ದ ಆಯೋಗ ವಾರದ ಒಳಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಇನ್ನೂ ಆರ್ ಆರ್ ನಗರದಲ್ಲಿರುವ ಬಾಲ್ಡ್ ವಿನ್ ಕೋ ಎಜುಕೇಶನ್ ಶಾಲೆ ವಿರುದ್ಧ ಪೋಷಕರು ಧರಣಿ ಕೂಡಾ ನಡೆಸಿದ್ರು.
PublicNext
14/03/2022 09:58 pm