ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ಇಂದಿನಿಂದ ಪ್ರೌಢ ಶಾಲೆ ಪ್ರಾರಂಭ , ಶಾಲಾ ಅವರಣದ ಬಳಿ ಪೊಲೀಸ್ ಬಂದೋಬಸ್ತ್

ದೊಡ್ಡಬಳ್ಳಾಪುರ : ಹಿಜಾಬ್ ವಿವಾದ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಶಾಲಾ ಕಾಲೇಜ್ ಗಳಿಗೆ ರಜೆ ಯನ್ನ ಘೋಷಣೆ ಮಾಡಿತ್ತು, ಇಂದಿನಿಂದ ಪ್ರೌಢ ಶಾಲೆ ಪ್ರಾರಂಭವಾಗುತ್ತಿರುವ ಹಿನ್ನೆಲೆ ಶಾಲಾ ಅಬಳವರಣದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ದೊಡ್ಡಬಳ್ಳಾಪುರ ನಗರದ ಸರ್ಕಾರಿ ಜೂನಿಯರ್ ಕಾಲೇಜ್, ಶ್ರೀದೇವರಾಜು ಅರಸ್ ಪಿಯು ಕಾಲೇಜ್ ಬಳಿ ಎಎಸ್ ಐ ಸೇರಿದಂತೆ ಮಹಿಳಾ ಪೊಲೀಸ್ ಕಾಸ್ಟೇಬಲ್ ಒಳಗೊಂಡಂತೆ ನಾಲ್ವರು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ, ವದಂತಿಗಳಿಗೆ ಕಿವಿಗೊಡದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ, ಪ್ರಚೋದನಕಾರಿ ಸಂದೇಶಗಳನ್ನ ನೀಡದಂತೆ ಸಾಮಾಜಿಕ ಜಾಲತಾಣಗಳಿಗೂ ಎಚ್ಚರಿಕೆ ನೀಡಲಾಗಿದೆ, ಒಂದು ವೇಳೆ ಪ್ರಚೋದನಕಾರಿ ಸಂದೇಶ ನೀಡಿದ್ದಲ್ಲಿ ಕಾನೂನು ಕ್ರಮವನ್ನು ಪೊಲೀಸರು ತೆಗೆದುಕೊಳ್ಳುವರು.

Edited By : Shivu K
Kshetra Samachara

Kshetra Samachara

14/02/2022 12:35 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ