ದೇವನಹಳ್ಳಿ: ಯುದ್ಧ ಭೀತಿಯ ಉಕ್ರೇನ್‌ನಿಂದ ರಾಜ್ಯದ 12ಜನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಸಚಿವ ಆರ್.ಅಶೋಕ್.
ಉಕ್ರೇನ್‌ನಿಂದ ಮುಂಬೈಗೆ ಬಂದು ಅಲ್ಲಿಂದ ಏರ್ ವಿಸ್ತಾರ್ ಮೂಲಕ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ 12 ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ತಮ್ಮ ಮಕ್ಕಳು ಸುರಕ್ಷಿತವಾಗಿ ವಾಪಸ್ ಬಂದಿದ್ದನ್ನು ಕಂಡ ಪೋಷಕರು ಸಂತಸಪಟ್ಟಿದ್ದಾರೆ. ಬಾಂಬೆಯಿಂದ 7ಗಂಟೆಗೆ ಹೊರಟ ಪ್ಲೈಟ್ ಬೆಳಗ್ಗೆ 8.50ಕ್ಕೆ ಬೆಂಗಳೂರು ನಗರ ತಲುಪಿದೆ. KIAಗೆ ಬಂದ ಪ್ರಯಾಣಿಕರನ್ನು ಸಚಿವ ಆರ್. ಅಶೋಕ್ ಬರಮಾಡಿಕೊಂಡರು.
ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳು ರಾಷ್ಟ್ರದ್ವಜ ಹಿಡಿದು ಸಂಭ್ರಮಿಸಿದ್ದಾರೆ.
ಬೆಂಗಳೂರಿಗೆ ಬಂದಿಳಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು- ನಬಾಯಿಸ್ ಹೂಡಾ , ಸೈಯದ್ ಹಬೀಬ್, ಪೂಜಾ ಕುಮಾರಿ ಯಾದವ್, ಸಂಪಂಗಿ ರಾಮರೆಡ್ಡಿ ಮೋನಿಕಾ, ಉದಯ್. ಕೆ.ವಿ, ಮಹಮ್ಮದ್ ಹಬೀದ್ ಆಲಿ ಶೌಕಾತ್, ಇಂಚರಾರಾಜ್ ಶಿವರಾಜ್ , ತುಷಾರುಮಧು , ವಿಜಯಲಕ್ಷ್ಮಿ ಚಕ್ರವರ್ತಿ, ಶ್ರೇಯಾ ಚಂದ್ರಶೇಖರ್, ರಿಯಾ ಕುಮಾರಿ.
ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇವರನ್ನು ಪ್ರೀತಿಯಿಂದ ಬರಮಾಡಿಕೊಂಡ ವಿಮಾನ ನಿಲ್ದಾಣ ಸಿಬ್ಬಂದಿ, ಪೋಷಕರು ಮತ್ತು ಅಧಿಕಾರಿಗಳು..ರಾಜ್ಯಕ್ಕೆ, ಬೆಂಗಳೂರಿಗೆ ಬಂದ ಬಗ್ಗೆ ವಿದ್ಯಾರ್ಥಿಗಳು & ಪೋಷಕರು ಸಂತಸ ವ್ಯಕ್ತಪಡಿಸಿದರು..
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
27/02/2022 11:26 am