ಬೆಂಗಳೂರು: ತೆರಿಗೆ ಬಾಕಿ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ರೇವಾ ಯೂನಿವರ್ಸಿಟಿ ಕ್ಯಾಂಪಸ್ಗೆ ಬೀಗ ಹಾಕಿದೆ.
ರೇವಾ ವಿಶ್ವವಿದ್ಯಾಲಯವು ಬಿಬಿಎಂಪಿಗೆ 16 ಕೋಟಿ ರೂ. ತೆರಿಗೆ ಕಟ್ಟುವುದನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಬಾಕಿ ಬೇಗ ಚುಕ್ತಾ ಮಾಡುವಂತೆ ಪದೇ ಪದೇ ನೋಟೀಸ್ ಕಳಿಸಿದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಕೊನೆಗೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಬಿಬಿಎಂಪಿ ಸಿಬ್ಬಂದಿ ರೇವಾ ವಿಶ್ವವಿದ್ಯಾಲದ ಮೇನ್ ಗೇಟ್‌ಗೆ ಬೀಗ ಜಡಿದಿದ್ದಾರೆ.
Kshetra Samachara
02/02/2022 10:28 am