ಬೆಂಗಳೂರು : ಬೆಂಗಳೂರು ವಿವಿ ಜ್ಞಾನಭಾರತಿಯಲ್ಲಿ ಎರಡು ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ಎಬಿವಿಪಿ ಮತ್ತು ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ಒಕ್ಕೂಟ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ವಿವಿಗೆ ಮುತ್ತಿಗೆ ಹಾಕಲು ಮುಂದಾದ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇನ್ನು ಬೆಂಗಳೂರು ವಿಶ್ವವಿದ್ಯಾಲಯದ ಹೊರಗೆ ಮತ್ತು ಒಳಗೆ ಎರಡು ಕಡೆ ಪ್ರತಿಭಟನೆ ನಡೆಯುತ್ತಿದ್ದು ಹೊರಗೆ ಎಬಿವಿಪಿ ಮತ್ತು ಒಳಗೆ ಅಂಬೇಡ್ಕರ್ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ಎಬಿವಿಪಿ ಸಂಘಟನೆಗೆ ವಿವಿ ಗೇಟ್ ಹಾಕಿದ ಪೊಲೀಸರು ಒಳಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಒಳ ನುಗ್ಗಲು ಪ್ರಯತ್ನಿಸಿದ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಕೊನೆಗೆ ಎಬಿವಿಪಿ ಸಂಘಟನೆಯನ್ನು ಪೊಲೀಸರು ಹೊರ ಕಳುಹಿಸಿದ್ದಾರೆ.
Kshetra Samachara
31/01/2022 01:57 pm