ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆನ್ನಾಗರ ಪಂಚಾಯತಿಗೆ ಮುತ್ತಿಗೆ ..!!

ಬೆಂಗಳೂರು ದಕ್ಷಿಣ: ಹೆನ್ನಾಗರ ಗ್ರಾಮ ಪಂಚಾಯಿತಿ ಅಧಿಕಾರಿಗಳ ಭ್ರಷ್ಟಾಚಾರವನ್ನ ವಿರೋಧಿಸಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಒತ್ತಾಯಿಸಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹೆನ್ನಾಗರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದಾರೆ . ಇನ್ನು ಪ್ರತಿಭಟನೆಯ ವೇಳೆ ಪೊಲೀಸರು ಬಾಗಿಲನ್ನು ತೆರೆದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನೆಕಾರಿಗೆ ಮಾತಿನ ಚಟುವಟಿಕೆ ನಡೆದಿದೆ .

ಇನ್ನೂ ಪಂಚಾಯ್ತಿಯ ಮುಂಭಾಗ ನೂರಾರು ಕಾರ್ಯಕರ್ತರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ ಆಗಿದ್ರು. ಇನ್ನು ಮಾವಳ್ಳಿ ಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು ಇನ್ನು ಸ್ಥಳಕ್ಕೆ ಆಗಮಿಸಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿನಾರಾಯಣ ಸ್ವಾಮಿ ಆದಷ್ಟು ಬೇಗ ತಮ್ಮ ಬೇಡಿಕೆಗಳನ್ನ ಈಡೇರಿಕೆ ಮಾಡುವುದಾಗಿ ಭರವಸೆಯನ್ನು ನೀಡಿದರು ಅಲ್ಲದೆ ಪ್ರಮುಖವಾಗಿ ಎಲ್ಲಾ ಹಳ್ಳಿಗಳಲ್ಲೂ ಸ್ಮಶಾನದ ಸಮಸ್ಯೆ ಇದೆ ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಲಕ್ಷ್ಮೀನಾರಾಯಣಸ್ವಾಮಿ ತಿಳಿಸಿದರು. ಇನ್ನೂ ಪ್ರತಿಭಟನೆಯಲ್ಲಿ ಮಾವಳ್ಳಿ ಶಂಕರ್ ಜಿಗಣಿ ಶಂಕರ್ ದಲಿತ ಪರ ಸಂಘಟನೆ ಒಕ್ಕೂಟದ ಮುಖಂಡರು ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

29/08/2022 03:32 pm

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ