ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯ ಬಳಿಕ ನನಗೆ ಗನ್ ಮ್ಯಾನ್ ನೀಡಲಾಗಿತ್ತು. ಆದರೆ, ಮೊನ್ನೆಯ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನವಾಗಿತ್ತು.ಇದಾದ ಬಳಿಕ ವಾಪಸ್ ಗನ್ ಮ್ಯಾನ್ ಪಡೆದಿದ್ದಾರೆ. ಮೊದಲಿನಿಂದಲೂ ನನಗೆ ಜೀವ ಬೆದರಿಕೆಯಿದೆ. ಹೀಗಾಗಿ ನಾನು ಈಗ ಗನ್ ಮ್ಯಾನ್ ವ್ಯವಸ್ಥೆ ನೀಡುವಂತೆ ಕಮಿಷನರ್‌ಗೆ ಮನವಿ ಮಾಡಿದ್ದೇನೆ ಎಂದು ನಟ ಚೇತನ್ ಹೇಳಿದ್ದಾರೆ.
ಮನೆ ಬಳಿ ಬೀಟ್ ವ್ಯವಸ್ಥೆ ಹೆಚ್ಚಿಸುವುದಾಗಿ ಕಮಿಷನರ್ ಭರವಸೆ ನೀಡಿದ್ದಾರೆ. ಗನ್ ಮ್ಯಾನ್ ಗಾಗಿ ಎಡಿಜಿಪಿ ಸೆಕ್ಯುರಿಟಿ ಬಳಿ ಮನವಿ ಮಾಡಲು ಹೇಳಿದ್ದಾರೆ. OCI ರದ್ದುಪಡಿಸುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.ನಾನೂ ಭಾರತೀಯ, ಕನ್ನಡಿಗನೇ, ಯಾವುದೇ ರೀತಿಯಲ್ಲೂ OCI ನಿಯಮ ಉಲ್ಲಂಘಿಸಿಲ್ಲ. ಉಲ್ಲಂಘಿಸುವುದು ಇಲ್ಲ. ನನ್ನ ತಾತ ತಂದೆ ಎಲ್ರೂ ಇಲ್ಲಿಯವರೆ ಎಂದು ನಟ ಚೇತನ್ ಕಮಿಷನರ್ ಕಚೇರಿ ಬಳಿ ಹೇಳಿದ್ರು.
PublicNext
04/03/2022 07:26 pm