ಬೆಂಗಳೂರು : ಜಯನಗರದಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿ ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಘಟನೆ ನಡೆದ ಸ್ಥಳದಲ್ಲಿ ಪ್ರಾಣಿಪ್ರಿಯರು ಮಡಿದ ನಾಯಿಗಾಗಿ ಕಂಬನಿ ಮಿಡಿದರು.
ನಾಯಿ ಸತ್ತ ಜಾಗದಲ್ಲಿ ನಿಂತು ಜಸ್ಟೀಸ್ ಫಾರ್ ಕರಿಯ ಎಂದು ಬರೆದು ಹೂ ಹಾಕಿ ಕಂಬನಿ ಮಿಡಿದರು. ಇನ್ನು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.
ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಕಳೆದ ತಿಂಗಳ 28 ನೇ ತಾರೀಖಿನಂದು ಬೆಳಗ್ಗೆ ರಸ್ತೆಯ ಮೇಲೆ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿ ಮೇಲೆ ಕಾರು ಚಲಿಸಲಾಗಿತ್ತು. ಬಳಿಕ ನಾಯಿ ಒದ್ದಾಡಿ ಒದ್ದಾಡಿ ಅಸುನೀಗಿತ್ತು.
ಇನ್ನು ನಾಯಿ ಸಾಯಿಸಿದ ಆರೋಪಿಗಳಿಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಪ್ರತ್ಯೇಕ ತಂಡದಿಂದ ಕಾರು ಚಾಲಕನನ್ನು ಹಿಡಿಯಲು ಮುಂದಾಗಿದ್ದಾರೆ.
PublicNext
06/06/2022 05:30 pm