ನೆಲಮಂಗಲ: ರಾಜ್ಯದಲ್ಲಿ ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ನಂತಹ ಟಫ್ ರೂಲ್ಸ್ ಜಾರಿಗೆ ತಂದಿದೆ. ಆದ್ರೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘನೆಯಾಗಿದೆ.
ನೆಲಮಂಗಲ ರಾ.ಹೆ 75 ಕುಣಿಗಲ್ ರಸ್ತೆಯ ಚಾಮುಂಡಿ ಡಾಬಾದಲ್ಲಿ ಗ್ರಾಹಕರಿಗೆ ಊಟ ಪಾರ್ಸಲ್ ನೀಡೋ ಬದಲು ಸಿಟ್ಟಿಂಗ್ ನಲ್ಲಿ ವೆಜ್- ನಾನ್ ವೆಜ್ ಊಟ ಸರ್ವೀಸ್ ಕೊಡೋ ಮೂಲಕ ಸರ್ಕಾರದ ರೂಲ್ಸ್ ಬ್ರೇಕ್ ಮಾಡಿದೆ.
ಇನ್ನೂ ಮಾಧ್ಯಮಗಳ ಕ್ಯಾಮರಾ ಕಾಣಿಸುತ್ತಿದ್ದಂತೆ ಡಾಬಾ ಸಿಬ್ದಂದಿಗಳು ತಬ್ಬಿಬ್ಬಾಗಿ ಓಡಾಡುತ್ತ, ಅಲ್ಲಿ ನೆರೆದಿದ್ದ ಗ್ರಾಹಕರನ್ನ ಹೊರ ಕಳಿಸಿ, ಡಾಬಾ ಗೇಟ್ ಎಳೆದು ಏನು ನೆಡೆದಿಲ್ಲವೇನೋ ಎನ್ನುವ ಹಾಗೆ ವರ್ತಿಸಿದ್ದಾರೆ.
ಈ ಸಂಬಂಧ ವಿಷಯ ತಿಳಿದ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಡಾಬಾ ಮ್ಯಾನೇಜರ್, ಸಿಬ್ಬಂದಿಗಳಿಗೆ ತರಾಟೆ ತಗೆದುಕೊಂಡರು.
ಇದೇ ವೇಳೆ ನೆಲಮಂಗಲ ಗ್ರಾಮಾಂತರ ಠಾಣಾ ಪಿಎಸ್ ಐ ಈರಮ್ಮ ಕೂಡ ಭೇಟಿ ನೀಡಿದ್ದು, ವೀಕೆಂಡ್ ಕರ್ಫ್ಯೂ ರೂಲ್ಸ್ ಉಲ್ಲಂಘನೆ ಹಿನ್ನಲೆ ಡಾಬಾ ಮೇಲೆ ಕೇಸ್ ದಾಖಲಿಸಿ ದಂಡ ಹಾಕುವಂತೆ ಸೂಚಿಸಿದ್ದಾರೆ.
Kshetra Samachara
08/01/2022 10:00 pm