ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ದಾಖಲೆ ಇಲ್ಲದ ನೆವ; ಅರಣ್ಯ ಇಲಾಖೆಯಿಂದ ರೈತರ ಜಮೀನು ಸ್ವಾಧೀನ

ದೊಡ್ಡಬಳ್ಳಾಪುರ: ದಶಕಗಳಿಂದಲೂ ಕೃಷಿ ಮಾಡುತ್ತಿದ್ದ ರೈತರ ಸಾಗುವಳಿ ಜಮೀನನ್ನು ಅರಣ್ಯ ಇಲಾಖೆ ಸ್ವಾಧೀನ ಪಡಿಸಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಬಳಿಯ ಮೀಸಲು ಅರಣ್ಯ ಪ್ರದೇಶದ ಸರಹದ್ದಿನಲ್ಲಿ ಕೆಳಗನ ನಾಯಕಂಡರಹಳ್ಳಿ ಗ್ರಾಮದ ರೈತರೇ ಇದೀಗ ಸಂಕಷ್ಟಕ್ಕೆ ಸಿಲುಕಿದವರು.

ಲಂಬಾಣಿ ಸಮುದಾಯಕ್ಕೆ ಸೇರಿದ ಇವರು ಸೌದೆ ಮಾರಿಯೂ ಜೀವನ ಸಾಗಿಸುತ್ತಿದ್ದಾರೆ. 1991ರಲ್ಲಿ ಬಗರ್ ಹುಕ್ಕುಂನಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಇಲ್ಲಿವರೆಗೂ ಹಕ್ಕುಪತ್ರ ನೀಡಿಲ್ಲ. ಅರಣ್ಯ ಭೂಮಿಯನ್ನು ರೈತರು ಒತ್ತುವರಿ ಮಾಡಿದ್ದಾರೆಂದು ಅರಣ್ಯ ಇಲಾಖೆ ಇಂದು ಜಮೀನು ಸ್ವಾಧೀನಕ್ಕೆ ಪಡೆದು, ಸಸಿ ನೆಡಲು ಮುಂದಾಗಿದೆ.

ಜಮೀನು ಕಳೆದುಕೊಳ್ಳುವ ಭಯದಲ್ಲಿರುವ ಜಯಾಬಾಯಿ, 40 ವರ್ಷಗಳಿಂದ ಇದೇ ಜಮೀನಿನಲ್ಲಿ ರಾಗಿ ಬೆಳೆಯುತ್ತಿದ್ದೇವೆ. ನನ್ನ ಮಕ್ಕಳಿಗೂ ಸಹ ಇದೇ ಜಮೀನು ಆಸರೆ. ಜಮೀನು ಹೋದರೆ ವಿಷ ಕುಡಿದು ಸಾಯಬೇಕಾದ ಸ್ಥಿತಿ ನಮ್ಮದು ಎಂದು ಅಳಲು ತೋಡಿಕೊಂಡರು.

ಸ್ವಾಧೀನ ಕಾರ್ಯಾಚರಣೆ ಬಗ್ಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಮುನಿರಾಜು, ಸ್ವಾಧೀನದಲ್ಲಿರುವ ರೈತರಿಗೆ ಕಂದಾಯ ಇಲಾಖೆ ಯಾವುದೇ ದಾಖಲೆ ನೀಡಿಲ್ಲ ಮತ್ತು ಇದೇ ಜಾಗವೆಂದು ಪೋಡಿ ಮಾಡಿಲ್ಲ. ಅರಣ್ಯ ಇಲಾಖೆ ಒತ್ತುವರಿಯಾಗಿರುವ ಕಾರಣಕ್ಕೆ ಜಾಗ ಸ್ವಾಧೀನ ಪಡಿಸಿ, ಅರಣ್ಯ ಬೆಳೆಸಲಾಗುವುದು. ಒಂದು ವೇಳೆ ರೈತರು ಜಮೀನಿಗೆ ಸಂಬಂಧಿಸಿದ ಸೂಕ್ತ ದಾಖಲೆ ನೀಡಿದರೆ ಜಮೀನು ಬಿಟ್ಟುಕೊಡಲಾಗುವುದು ಎಂದರು.

Edited By : Shivu K
PublicNext

PublicNext

10/01/2022 08:02 am

Cinque Terre

32.17 K

Cinque Terre

0

ಸಂಬಂಧಿತ ಸುದ್ದಿ