ಬೆಂಗಳೂರು: ಇನ್ನೂ ಗಣೇಶನ ಹಬ್ಬನೇ ಬಂದಿಲ್ಲ, ಗಣೇಶನ ಮೂರ್ತಿ ಇಟ್ಟು ಸಂಭ್ರಮಿಸಿ, ಗಣೇಶನ ಮೂರ್ತಿಯನ್ನ ಕೆರೆಯಲ್ಲಿ ವಿಸರ್ಜನೆ ಮಾಡುವ ಮುನ್ನವೇ ಯುವಕನೋರ್ವ ಕೆರೆಯಲ್ಲಿನ ಆಳ ನೋಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನೆಡೆದಿದೆ.
ಹೀಗೆ ಶವಾಗಾರದಲಿ ಹೆಣವಾಗಿ ಮಲಗಿರುವ ಚಿರ ಯುವಕ, ಆಸ್ಪತ್ರೆ ಶವಾಗಾರದ ಮುಂದೆ ಗೋಳಾಡ್ತಿರೋ ಕುಟುಂಬ. ಈ ದೃಶ್ಯ ಕಂಡು ಬಂದದ್ದು, ನೆಲಮಂಗಲ ನಗರದ ಸರ್ಕಾರಿ ಆಸ್ಪತ್ರೆ ಬಳಿ. ಹೌದು.. ದ್ವಿತೀಯ ಪಿಯುಸಿ ಮುಗಿಸಿ, ಇತ್ತೀಚೆಗಷ್ಟೆ ಡಿಗ್ರಿಗೆ ಆಡ್ಮಿಷನ್ ಆಗಿದ್ದ ಚಿಕ್ಕಬಾಣಾವರ ನಿವಾಸಿ 19 ವರ್ಷದ ಯುವಕ ಬಸವರಾಜ್ ಬೌಲಿ ತನ್ನ ಸ್ನೇಹಿತರೊಂದಿಗೆ ಬೆಂ.ಉತ್ತರ ತಾಲ್ಲೂಕು ಕುದುರುಗೆರೆ ಕೆರೆಯ ಆಳ ನೋಡಿ ಗಣೇಶ ಮೂರ್ತಿಯ ಎತ್ತರ ಡಿಸೈಡ್ ಮಾಡಲು ಕೆರೆಗೆ ಇಳಿದಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇನ್ನೂ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾದನಾಯಕನಹಳ್ಳಿ ಪೊಲೀಸ್ರು ಸ್ಥಳೀಯರ ನೆರವಿನೊಂದಿಗೆ ಮೃತದೇಹ ಹೊರತೆಗೆದು, ಶವ ಪರೀಕ್ಷೆಗಾಗಿ ಮೃತದೇಹವನ್ನ ನೆಲಮಂಗಲ ಶವಾಗಾರಕ್ಕೆ ರವಾನಿಸಿದ್ದಾರೆ. ಬಳಿಕ ಮೃತನ ಅಗಲಿಕೆಯ ನೋವನ್ನು ತಾಳಲಾರದ ಕುಟುಂಬಸ್ಥರು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಿತ್ರ, ಪಬ್ಲಿಕ್ ನೆಕ್ಸ್ಟ್, ನೆಲಮಂಗಲ ಬೆಂಗಳೂರು
PublicNext
22/08/2022 09:33 pm