ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳನ್ನು ಕೊಂದು ಜೈಲು ಸೇರಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ

ಚಿಕ್ಕಪೇಟೆ: ಕೊಲೆ ಪ್ರಕರಣ ಆರೋಪದಡಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ವಿಚಾರಣೆಗಾಗಿ ಇಂದು ಸಿಟಿ ಸಿವಿಲ್ ಕೋರ್ಟ್ ಆಗಮಿಸಿದ್ದಾಗ ಕೋರ್ಟ್ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಜತೀನ್ ಕುಮಾರ್ ಎಂಬಾತ ಮೂರನೇ ಕಟ್ಟಡದಿಂದ ಕೆಳ ಬಿದ್ದಿರುವ ಆರೋಪಿಯಾಗಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಮಿಳುನಾಡು ಮೂಲದ ಜತೀನ್ ವೃತ್ತಿಯಲ್ಲಿ ಟೆಕ್ಕಿಯಾಗಿದ್ದ. ಕೆಲ ವರ್ಷಗಳ ಹಿಂದೆ ಲಕ್ಷ್ಮೀಶಂಕರಿ ಪ್ರೀತಿಸಿ ಮದುವೆಯಾಗಿದ್ದ‌.‌ ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿಗೆ ಮೂರು ವರ್ಷದ ಹಾಗೂ 2 ವರ್ಷದ ಮಗುವಿತ್ತು. ಪತ್ನಿಯು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಜತಿನ್ ಗೆ ಕೆಲಸ‌ ಸಿಗದೆ ಓಡಾಡಿಕೊಂಡಿದ್ದ..‌ ಇದೇ ವಿಚಾರವಾಗಿ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು.

ಕಳೆದ 2020 ಮಾರ್ಚ್ 20 ರಂದು ಪತ್ನಿಯು ಮನೆಯಲ್ಲಿ‌‌ ಇಲ್ಲದಿದ್ದಾಗ ಮನೆಯಲ್ಲಿ‌ ಊಟ ಮಾಡಿ ಮಲಗಿದ್ದ ಇಬ್ಬರು ಮಕ್ಕಳನ್ನು‌ ಕತ್ತು ಹಿಸುಕಿ ಸಾಯಿಸಿದ್ದ. ಪತ್ನಿ ದೂರು ನೀಡಿದ ಮೇರೆಗೆ ಹುಳಿಮಾವು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ಇಂದು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಪ್ರಕರಣ ಸಂಬಂಧ ವಿಚಾರಣೆಯಿತ್ತು. ಹೀಗಾಗಿ ಜೈಲಿನಿಂದ ಸಿಎಆರ್ ಪೊಲೀಸರು ಎಸ್ಕಾರ್ಟ್ ಮೂಲಕ ಕರೆ ತಂದಿದ್ದರು‌. ಈ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿ ವಿಚಾರಣಾಧೀನ ಅವಧಿಯಲ್ಲಿ ಜೈಲಿನಿಂದಲೇ ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.

Edited By :
Kshetra Samachara

Kshetra Samachara

13/04/2022 08:36 pm

Cinque Terre

3.26 K

Cinque Terre

0

ಸಂಬಂಧಿತ ಸುದ್ದಿ