ಯಲಹಂಕ: ಗ್ರಾಮೀಣ & ಪಂಚಾಯತ್ ರಾಜ್ ಇಲಾಖೆಗೆ ಸೇರದ, ಕಂದಾಯ ಇಲಾಖೆಯ ಹೊರತಾಗಿ ಬೆಸ್ಕಾಂ, ಎಸ್ಕಾಂ, ಮೆಸ್ಕಾಂಗಳಿಗೆ ಸೇರಿದ ಇಂಜಿನಿಯರಿಂಗ್ ವಿಭಾಗದವರನ್ನು E.O ಆಗಿ ನೇಮಕ ಮಾಡಿರುವ ವಿರುದ್ಧ ಕಂದಾಯ ಇಲಾಖೆಯ ಸಿಬ್ಬಂದಿ ಪ್ರತಿಭಟನೆಗೆ ಇಳಿದಿದ್ದಾರೆ.ಯಲಹಂಕ ತಾಲೂಕಿನ ತಾಲೂಕು ಪಂಚಾಯ್ತಿಗೆ ಕಾರ್ಯನಿರ್ವಹಣ ಅಧಿಕಾರಿಯಾಗಿ ಪ್ರಕಾಶ್ ಎಂಬುವವರನ್ನು ಸರ್ಕಾರ ನೇಮಿಸಿದೆ. ಸರ್ಕಾರದ ಈ ನಡೆ ವಿರುದ್ಧ ಕಂದಾಯ ಇಲಾಖೆ ನಮ್ಮಲ್ಲೆ ಇರುವ ಹಿರಿಯರಿಗೆ ಪ್ರಮೋಷನ್ ನೀಡಿ, EO ಗಳನ್ನಾಗಿಸಿ. ಬೇರೆ ಇಲಾಖೆಯವರು ಕಂದಾಯ ಇಲಾಖೆಯ ಸೀನಿಯರ್ ಆಗಿ ಸೇವೆ ಮಾಡುವುದು ಕಷ್ಟ ಆಗ್ತದೆ. ಆದ್ದರಿಂದ ಸರ್ಕಾರದ ನಡೆ ಖಂಡಿಸಿ ಯಲಹಂಕ ತಾಲೂಕಿನ 32 ಇಲಾಖೆಗಳ 50ಕ್ಕು ಹೆಚ್ಚು ಜನ ಯಲಹಂಕ ತಾಲೂಕು ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿದರು.
ಪ್ರಕಾಶ್ ರವರು ವಿಜಯಪುರ ಜಿಲ್ಲೆ ಹೂವಿನಡಗಲಿಯ ಕಾರ್ಯನಿರ್ವಾಹಕ ಇಂಜಿನಿಯರ್. ಪ್ರಕಾಶ್ ನಿಗಮ ಮಂಡಳಿಯಿಂದ ಪಂಚಾಯತ್ ರಾಜ್ ಇಲಾಖೆಗೆ ಬಂದಿರುವುದು ಖಂಡನೀಯ. ಈಗ ಯಲಹಂಕ ತಾಲೂಕಿನ E.O.ಆಗಿ ಕರ್ತವ್ಯಕ್ಕೆ ಹಾಜರಾಗುವುದು, ತಪ್ಪು.. ಇನ್ನು ಬೆಂಗಳೂರು ಉತ್ತರ ತಾಲೂಕಿನ E.O ಆಗಿ ರಮೇಶ್ ರವರು ನೇಮಕವಾಗಿರುವುದು ಸಹ ಕಾನೂನು ಬಾಹಿರ. ಕೂಡಲೇ ಇಬ್ಬರು E.O.ಗಳನ್ನು ಮಾತೃ ಸಂಸ್ಥೆಗೆ ವರ್ಗಾಯಿಸಿ. ಕೂಡಲೇ ಕಂದಾಯ ಇಲಾಖೆಯ ಸೀನಿಯರ್ಸ್ ನ E.O ಹುದ್ದೆಗೆ ನೇಮಿಸಿ ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Kshetra Samachara
02/09/2022 07:41 pm