ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಆಪರೇಷನ್ ಗಂಗಾ' ಗೆ ಸಾಥ್: ರುಮೇನಿಯಾ ಮೇಯರ್ ಗೆ ಸಚಿವ ಸಿಂಧಿಯಾ ಕೃತಜ್ಞತೆ

ಬೆಂಗಳೂರು: ಕಳೆದ 9 ದಿನಗಳಿಂದಲೂ ಯುಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. 20000ಕ್ಕೂ ಹೆಚ್ಚು ಭಾರತ ಮೂಲದ ವಿದ್ಯಾರ್ಥಿಗಳು ಯುಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸಾವಿನ ದವಡೆಯಿಂದ ಪಾರು ಮಾಡಲು ಕೇಂದ್ರ ಸರ್ಕಾರ ಸಾವಿರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡುತ್ತಿದೆ.

ಈ ವೇಳೆ ಕೇಂದ್ರ ಸರ್ಕಾರದ ಕಾರ್ಯಾಚರಣೆಗೆ ಯುಕ್ರೇನ್ ಹೊಂದಿಕೊಂಡ ರಾಷ್ಟ್ರಗಳು ಭಾರತದ ವಿದ್ಯಾರ್ಥಿಗಳ ಸುಗಮ ಸಂಚಾರ ವ್ಯವಸ್ಥೆಗೆ ಸಾಥ್ ನೀಡಿದೆ. ಇಂತಹ ಪ್ರಯತ್ನಗಳಿಂದ ಸಾವಿರಾರು ಭಾರತೀಯರು ಸುರಕ್ಷಿತವಾಗಿ ಭಾರತ ತಲುಪಲು ಸಾಧ್ಯವಾಗಿದೆ.ಈ ಸಂದರ್ಭ ಕೇಂದ್ರ ನಾಗರಿಕ ಮತ್ತು ವಿಮಾನ ಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ರುಮೇನಿಯಾ ಮೇಯರ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರುಮೇನಿಯಾ ಮೇಯರ್ ಸಹ ರುಮೇನಿಯಾದ ಕೆಲಸ- ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌.ಭಾರತದ ವಿದ್ಯಾರ್ಥಿಗಳಿಗೆ ನಾವು ಆಶ್ರಯ ಕೊಟ್ಟಿದ್ದೇವೆ. ಊಟ, ವಸತಿ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ಕೇಂದ್ರ ವಿಮಾನ ಯಾನ ಸಚಿವರಿಗೆ ನೂರಾರು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ವಹಿಸಿದರು.

SureshBabu PublicNext

Edited By : Manjunath H D
PublicNext

PublicNext

05/03/2022 06:15 pm

Cinque Terre

43.06 K

Cinque Terre

5