ದೇವನಹಳ್ಳಿ: ಅಪ್ಪಿತಪ್ಪಿ ಯುಕ್ರೇನ್ ಮೇಲೆ ಬೀಳುವ ಮಿಸೈಲ್/ಬಾಂಬ್ NATO ದೇಶಗಳ ಮೇಲೆ ಬಿದ್ದರೆ, ರಷ್ಯಾದ ವಿರುದ್ಧ ನ್ಯಾಟೊ ರಾಷ್ಟ್ರ ಯುದ್ಧಕ್ಕೆ ದುಮುಕುವುದು ಪಕ್ಕಾ. ಯೂರೋಪಿಯನ್ ಯೂನಿಯನ್ & ನ್ಯಾಟೋ ದೇಶಗಳೇನಾದ್ರು ಯುದ್ಧಕ್ಕೆ ಧುಮುಕಿದರೆ ಅದು 3ನೇ ಪ್ರಪಂಚ ಯುದ್ಧ ಪ್ರಾರಂಭ ಆದಂತೆ. ಆದ್ದರಿಂದ ಯುಕ್ರೇನ್ ಅಷ್ಟೇ ಅಲ್ಲದೇ ರಷ್ಯಾದ ಸಾವಿರಾರು ವಿದ್ಯಾರ್ಥಿಗಳು ಯುದ್ಧದ ಆತಂಕದಿಂದ ರಷ್ಯಾ ತೊರೆಯುತ್ತಿದ್ದಾರೆ. ರಷ್ಯಾದ ಕ್ರಿಮಿಯಾ, ಕಜನ್, ಯೊಷ್ಕವೊಲ ನಗರಗಳಿಂದ ಸ್ವದೇಶಗಳತ್ತ ತೆರಳ್ತಿದ್ದಾರೆ. ಈ ಬಗ್ಗೆ ರಷ್ಯಾದಿಂದ ವಾಪಸ್ ಆದ ನಾಲ್ಕು ಜನ ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ನಮ್ಮ ಸೀನಿಯರ್ ರಿಪೋರ್ಟರ್ ಸುರೇಶ್ ಬಾಬು ದೇವನಹಳ್ಳಿ ಏರ್ಪೋರ್ಟ್‌ನಲ್ಲಿ ನಡೆಸಿರುವ ChitChat ಇಲ್ಲಿದೆ ನೋಡಿ.
PublicNext
03/03/2022 06:27 pm