ಬೆಂಗಳೂರು : ಯುದ್ಧ ಪೀಡಿತ ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಮುಂದಾಗಿರುವ ಭಾರತ ಸರ್ಕಾರ 'ಆಪರೇಷನ್ ಗಂಗಾ' ಹೆಸರಿನಡಿ ಭಾರತೀಯರ ಏರ್ ಲಿಫ್ಟ್ ಗೆ ಹೆಚ್ಚಿನ ಒತ್ತು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕುಜನ ಕೇಂದ್ರ ಸಚಿವರಿಗೆ ಹೆಚ್ಚಿನ ಜವಾಬ್ದಾರಿಯನ್ನು ಸಹ ನೀಡಿದ್ದು, ಉಕ್ರೇನ್ ನ ನೆರೆಹೊರೆ ರಾಷ್ಟ್ರಗಳಿಗೆ ತೆರಳಿದ್ದಾರೆ.
ಒಂಬತ್ತು ವಿಮಾನಗಳು ಭಾರತೀಯರ ಏರ್ ಲಿಫ್ಟ್ ನಲ್ಲಿ ನಿರತವಾಗಿವೆ. ಇದುವರೆಗೂ 1500 ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ.ಸದ್ಯ ಕರ್ನಾಟಕ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಕನ್ನಡಿಗರ ಏರ್ ಲಿಫ್ಟ್ ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಹ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿ ಭಾರತ ಮತ್ತು ರಾಜ್ಯಕ್ಕೆ ತಲುಪಲು ಸೂಕ್ತ ಕ್ರಮ ಜರುಗಿಸಿದ್ದೇವೆ ಎಂದಿದ್ದಾರೆ.ಕೇಂದ್ರಸರ್ಕಾರ ಅಪರೇಷನ್ ಗಂಗಾ ಅಡಿ ಭಾರತೀಯರ ಸುರಕ್ಷತಾ ವಾಪಸಾತಿಗೆ ಹೆಚ್ಚು ಒತ್ತು ನೀಡಿರುವುದು ಗಮನ ಸೆಳೆದಿದೆ.
PublicNext
01/03/2022 03:03 pm