ಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಯುದ್ಧ ನಡೆಯುತ್ತಿರುವ ಉಕ್ರೇನಿನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟ ನಿಶಿದ್ಧ. ಆದರೆ ಭಾರತ ಮೂಲದವರ ಏರ್ಲಿಫ್ಟ್ ಗಾಗಿ ಯುದ್ಧಪೀಡಿತ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಮಾತ್ರ ಹಾರಾಟ ನಡೆಸಿದೆ. ಅಲ್ಲಿನ ಭಾರತೀಯ ಮೂಲದವರನ್ನು ಭಾರತಕ್ಕೆ ಏರ್ಲಿಫ್ಟ್ ಮಾಡಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಡಿ ಹರಸಾಹಸ ಪಡುತ್ತಿದೆ. ಈ ಬಗೆಗಿನ ಗ್ರಾಫಿಕ್ಸ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ವಿಶ್ವದ ಯಾವ ರಾಷ್ಟ್ರವೂ ತೆಗೆದುಕೊಳ್ಳದ ರಿಸ್ಕನ್ನು ಭಾರತ ತೆಗೆದುಕೊಂಡಿದೆ. PlaneFinder ಆ್ಯಪ್ ನಿರ್ವಾಹಕರು ಗ್ರಾಫಿಕ್ಸ್ ಮೂಲಕ ಈ ವಿಷಯದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ..
ಎಲ್ಲಾ ಭಾರತೀಯರೂ ಹೆಮ್ಮೆ ಪಡುವ ಕ್ಷಣಗಳು. ಕಾಮೆಂಟರಿಯನ್ನು ಎಚ್ಚರಿಕೆಯಿಂದ ಆಲಿಸಿ, ವಿಶ್ವದ ಒಂದು ದೇಶಕ್ಕೆ ಮಾತ್ರ ನೋ ಫ್ಲೈಯಿಂಗ್ ಝೋನ್‌ನಲ್ಲಿ ಹಾರಾಟ ನಡೆಸಲು ಅವಕಾಶವಿದೆ. ಆ ದೇಶ ಭಾರತ ಮತ್ತು ವಿಮಾನ ಏರ್ ಇಂಡಿಯಾದ್ದು ಎಂದು ಕೇಳುವಾಗ ಹೆಮ್ಮೆ ಎನಿಸುತ್ತದೆ.
SureshBabu Babu ಪಬ್ಲಿಕ್ ನೆಕ್ಟ್ಸ್ ಬೆಂಗಳೂರು..
PublicNext
04/03/2022 03:10 pm