ದೊಡ್ಡಬಳ್ಳಾಪುರ :ಪಬ್ಲಿಕ್ ನೆಕ್ಸ್ಟ್ ವರದಿಯ ಇಂಪ್ಯಾಕ್ಟ್ ನಿಂದ ಒಂದು ವರ್ಷದಿಂದ ರಸ್ತೆಯಲ್ಲೇ ಕೊಳೆಯುತ್ತಿದ್ದ ಕಸಕ್ಕೆ ಮುಕ್ತಿ ಸಿಕ್ಕಿದೆ. ನಗರಸಭೆ ಸಿಬ್ಬಂದಿ ರಸ್ತೆಯಲ್ಲಿ ಬಿದ್ದಿದ್ದ ಕಸವನ್ನ ತೆರವುಗೊಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯ ಚೇತನ ಸ್ಕೂಲ್ ಹಿಂಭಾಗದ ರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ಕಸ ಕೊಳೆಯುತ್ತಲೆ ಇತ್ತು. ರಸ್ತೆಯನ್ನೇ ಆವರಿಸಿದ ಕಸದ ರಾಶಿ ಜನರ ಓಡಾಟಕ್ಕೆ ಕಿರಿಕಿರಿಯಾಗಿತ್ತು. ಕಸದ ರಾಶಿಯಿಂದ ಹಂದಿ ಮತ್ತು ನಾಯಿಗಳ ಕಾಟ ಸಹ ಪ್ರಾರಂಭವಾಗಿತ್ತು. ದೊಡ್ಡಬಳ್ಳಾಪುರ ನಗರಸಭೆ ಮತ್ತು ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ಗಡಿಭಾಗದಲ್ಲಿ ಈ ರಸ್ತೆ ಬರುತ್ತಿದ್ದು, ಎರಡು ಸ್ಥಳೀಯ ಸಂಸ್ಥೆಗಳ ಇಲ್ಲಿನ ಕಸದ ವಿಲೇವಾರಿ ಜವಾಬ್ದಾರಿ ನಮ್ಮದ್ದಲ್ಲ ಎಂದು ಸುಮ್ಮನಾಗಿದ್ರು.
ಗಡಿ ಸಮಸ್ಯೆಯಿಂದ ವಿಲೇವಾರಿ ಆಗದ ಕಸ ಎಂಬ ವರದಿಯನ್ನ ಆಗಸ್ಟ್ 16 ರಂದು ಪಬ್ಲಿಕ್ ನೆಕ್ಸ್ಟ್ ನಲ್ಲಿ ಪಬ್ಲಿಷ್ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತ ನಗರಸಭೆ ಸಿಬ್ಬಂದಿ ಕಸವನ್ನ ವಿಲೇವಾರಿ ಮಾಡಿದ್ದಾರೆ. ವಾರ್ಡ್ 29ರ ನಗರಸಭಾ ಸದಸ್ಯೆ ರೂಪಿಣಿ ಮಂಜುನಾಥ್ ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಪಂದಿಸಿ ಕಸ ವಿಲೇವಾರಿಗೆ ಕ್ರಮ ತೆಗೆದುಕೊಂಡು ಕಾರ್ಯರೂಪಕ್ಕೆ ತಂದಿದ್ದಾರೆ. ಈ ರಸ್ತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿದ್ದು, ಆದರೆ ತಮ್ಮ ವಾರ್ಡ್ ಪಕ್ಕದಲ್ಲಿಯೇ ಇರುವ ಕಸ ವಾರ್ಡ್ ನಿವಾಸಿಗಳ ಕಷ್ಟಕ್ಕೆ ಕಾರಣವಾಗುತ್ತೆ ಎಂಬ ಕಾರಣಕ್ಕೆ ರೂಪಿಣಿ ಮಂಜುನಾಥ್ ಕಸ ವಿಲೇವಾರಿ ಮಾಡುವ ಜವಾಬ್ದಾರಿ ತೆಗೆದುಕೊಂಡು ಕಸಕ್ಕೆ ಮುಕ್ತಿ ನೀಡಿದ್ದಾರೆ.
PublicNext
22/08/2022 02:12 pm