ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳ ಆವರಣದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ಸ್

ಬೆಂಗಳೂರು: ಇ-ವಾಹನ ಖರೀದಿಗೆ ಕೇವಲ ಉತ್ತೇಜನ ಮಾತ್ರವಲ್ಲದೆ ಓಡಾಟಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನೂ ಒದಗಿಸಲು ಕೇಂದ್ರ ರಾಜ್ಯ ಸರ್ಕಾರಗಳು ಮುಂದಡಿ ಇಟ್ಟಿವೆ. ಈ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಇ-ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ನಗರದಲ್ಲಿರುವ ಇ-ವಾಹನಗಳ ಅನುಕೂಲಕ್ಕಾಗಿ ಮತ್ತು ಖರೀದಿಸುವಂತೆ ಜನರನ್ನು ಉತ್ತೇಜಿಸಲು ಮೆಟ್ರೋ ನಿಲ್ದಾಣಗಳ ಆವರಣದಲ್ಲಿ ಇ-ಚಾರ್ಜಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಹೋಂಡಾ ಇ ಟೆಕ್ನಾಲಾಜಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ನಮ್ಮ ಮೆಟ್ರೊ ಮುಂದಾಗಿದೆ.

ಈ ಕ್ರಮವು ಹೋಂಡಾ ಚಾರ್ಜಿಂಗ್ ಬ್ಯಾಟರಿ ಉಪಯೋಗಿಸುವ ಎಲೆಕ್ನಿಕಲ್ ತ್ರಿಚಕ್ರ ವಾಹನ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಚಾರ್ಜಿಂಗ್ ಕೇಂದ್ರಗಳನ್ನು ಹುದುಕಾಡಿಕೊಂಡು ಅಲೆದಾಡುವ ಪರಿಸ್ಥಿತಿ ತಪ್ಪಲಿದೆ. ಹೋಂಡಾ ಕಂಪನಿಯ ಬ್ಯಾಟರಿ ಹೊಂದಿರುವ ಎಲೆಕ್ಟಿಕ್ ತ್ರಿಚಕ್ರ ವಾಹನಗಳ ಬ್ಯಾಟರಿಯನ್ನು ಮಾತ್ರ ಇಲ್ಲಿ ಚಾರ್ಜ್ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮಾರ್ಟ್ ಕಾರ್ಡ್‌ನಲ್ಲಿ ಸಿಗಲಿದೆ ಮಾಹಿತಿ:

ಎಲೆಕ್ಟಿಕ್ ತ್ರಿಚಕ್ರ ವಾಹನ ಖರೀದಿಸುವ ಸಂದರ್ಭದಲ್ಲಿ ನಾಲ್ಕು ಬ್ಯಾಟರಿ ಮತ್ತು ಒಂದು ಸ್ಮಾರ್ಟ್ ಕಾರ್ಡ್ ಕೊಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ನಿರ್ದಿಷ್ಟ ಬ್ಯಾಟರಿ ಮತ್ತು ವಾಹನದ ಸಂಪೂರ್ಣ ಮಾಹಿತಿ ಹೊಂದಿರುತ್ತದೆ. ಅದನ್ನು ಚಾರ್ಜರ್ ಯಂತ್ರದಲ್ಲಿ ಉಪಯೋಗಿಸುವ ಮೂಲಕ ತ್ರಿಚಕ್ರ ವಾಹನ ಸವಾರರು ಬ್ಯಾಟರಿ ಚಾರ್ಚ್ ಮಾಡಿಕೊಳ್ಳಬಹುದಾಗಿದೆ ಎಂದು ವಾಹನ ಸಂಸ್ಥೆ ತಿಳಿಸಿದೆ.

Edited By : Vijay Kumar
PublicNext

PublicNext

15/08/2022 02:22 pm

Cinque Terre

23.06 K

Cinque Terre

0

ಸಂಬಂಧಿತ ಸುದ್ದಿ