ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 75 ಎಲೆಕ್ಟ್ರಿಕ್ ಬಸ್‌ಗಳನ್ನು ಸಿಲಿಕಾನ್ ಸಿಟಿಯ ರಸ್ತೆಗೆ ಇಳಿಸಿದ ಬಿಎಂಟಿಸಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಬಿಎಂಟಿಸಿಯ 75 ಎಲೆಕ್ಟ್ರಿಕ್ ಬಸ್‌ಗಳಿಗೆ ಇಂದು ಚಾಲನೆ ನೀಡಿದರು. ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್​​ಗಳನ್ನು ಬಿಎಂಟಿಸಿ ರಸ್ತೆಗಿಳಿಸಿದೆ.

12 ಮೀ. ಉದ್ದದ ನಾನ್ ಎಸಿ ಈ ಬಸ್​​ಗಳು 40+1 ಆಸನಗಳನ್ನು ಹೊಂದಿವೆ. ಈ ಬಸ್​​ಗಳು ಮೆಜೆಸ್ಟಿಕ್- ವಿದ್ಯಾರಣ್ಯಪುರ, ಶಿವಾಜಿನಗರ-ಯಲಹಂಕ, ಯಲಹಂಕ- ಕೆಂಗೇರಿ, ಮೆಜೆಸ್ಟಿಕ್-ಯಲಹಂಕ ಉಪನಗರ, ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಸಂಚರಿಸಲಿವೆ.

ಎಲೆಕ್ಟ್ರಿಕ್ ಬಸ್​​ಗಳು ಒಂದು ಬಾರಿ ಚಾರ್ಜ್ ಆದ ನಂತರನಲ್ಲಿ 150 ಕಿ.ಮೀ. ಕ್ರಮಿಸುತ್ತವೆ. ಉಳಿದ 75 ಕಿ.ಮೀ.ಗಳನ್ನು Opportunity Charging ಮೂಲಕ ಕಾರ್ಯಾಚರಿಸಲಾಗುತ್ತದೆ. ಅಂದರೆ ಬಸ್​ಗಳು ರಿಚಾರ್ಜ್ ಮಾಡಲು ಡಿಪೋಗಳಿಗೆ ಹೋಗಬೇಕಿಲ್ಲ. ಬದಲಿಗೆ ಮಾರ್ಗದಲ್ಲಿರುವ ನಿಗದಿತ ಬಸ್ ನಿಲ್ದಾಣಗಳಲ್ಲಿ ಸಮಯ ಸಿಕ್ಕಾಗ ತ್ವರಿತವಾಗಿ ಚಾರ್ಚ್ ಮಾಡುವ ವ್ಯವಸ್ಥೆ Opportunity Charging ಗೆ ಕೆಂಪೇಗೌಡ ಬಸ್ ನಿಲ್ದಾಣ (ಘಟಕ-07), ಯಶವಂತಪುರ (ಘಟಕ-08), ಕೆಂಗೇರಿ (ಘಟಕ-12) ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ.

ಮೆಜೆಸ್ಟಿಕ್- ವಿದ್ಯಾರಣ್ಯಪುರ: 10 ಬಸ್​ಗಳು ಶಿವಾಜಿನಗರ- ಯಲಹಂಕ: 20ಯಲಹಂಕ- ಕೆಂಗೇರಿ: 10ಮೆಜೆಸ್ಟಿಕ್- ಯಲಹಂಕ ಉಪನಗರ: 15ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್-20

Edited By : Vijay Kumar
PublicNext

PublicNext

14/08/2022 07:49 pm

Cinque Terre

13.23 K

Cinque Terre

1

ಸಂಬಂಧಿತ ಸುದ್ದಿ