ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯಾವ ರಸ್ತೆ ನೋಡಿದ್ರೂ ಗುಂಡಿಗಳದ್ದೇ ಕಾರುಬಾರು. ಮಳೆಯ ಪರಿಣಾಮ ಡಾಂಬರು ಕಿತ್ತು ಮಣ್ಣೆಲ್ಲ ಎದ್ದು ಕಾಣ್ತಿದೆ. ನಗರದ ಈ ಒಂದು ರಸ್ತೆಯಲ್ಲಿ ದಿನನಿತ್ಯ ಬೀಳುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಇತ್ತೀಚೆಗೆ ಒಬ್ಬರು ಮಹಿಳೆಯೂ ಪ್ರಾಣ ಕಳಕೊಂಡಿದ್ದಾರೆ! ಹಾಗಾದ್ರೆ ಈ ಅಪಾಯಕಾರಿ ರಸ್ತೆ ಯಾವುದು? ಯಾವ ಸ್ಥಿತಿಯಲ್ಲಿದೆ ನೋಡೋಣ ಬನ್ನಿ...
ಗುಂಡಿ ಬಿದ್ದಿರೋ ಈ ರಸ್ತೆ ಚಿಕ್ಕದಾದ್ರೂ ಆದ ಅನಾಹುತ ದೊಡ್ಡದು. ಅಂದಹಾಗೆ ಈ ರಸ್ತೆ ಇರೋದು ಹೇರೋಹಳ್ಳಿ ವಾರ್ಡ್ ನ ಅಂಜನ ನಗರದಲ್ಲಿ.
ಈ ಹೇರೋಹಳ್ಳಿ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಅಷ್ಟಕಷ್ಟೇ. ಅದ್ರಲ್ಲಿ ಈ ರಸ್ತೆಯಲ್ಲಂತೂ 7-8 ಕಿ.ಮೀ. ಮಧ್ಯೆ ರಸ್ತೆಯಲ್ಲೇ ಗುಂಡಿ ಬಿದ್ದಿವೆ. ಈ ಗುಂಡಿಯಲ್ಲಿ ಪ್ರತಿದಿನವೂ ಬೀಳುವವರ ಸಂಖ್ಯೆ ಬಹಳಷ್ಟಿದೆ. 3-4 ತಿಂಗಳ ಹಿಂದೆ ಗರ್ಭಿಣಿಯೊಬ್ಬರು ಗಾಡಿ ಚಲಾಯಿಸುತ್ತಾ ಬಂದು ಈ ಗುಂಡಿಗೆ ಬಿದ್ದು ಸಾವನ್ನಪ್ಪಿದ್ರು! ನಂತರ ಎಚ್ಚೆತ್ತ ಅಧಿಕಾರಿಗಳು, ರಸ್ತೆಗೆ ತೇಪೆ ಡಾಂಬರು ಮಾಡಿದ್ರು. ಆದ್ರೀಗ ಮತ್ತೆ ಹೊಂಡಾಗುಂಡಿಗಳಾಗಿವೆ.
-ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
10/08/2022 09:38 pm