ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಹೋಬಳಿಯ ಕೋಡಿಪಾಳ್ಯದ ಮುಖ್ಯ ರಸ್ತೆಯಲ್ಲಿ ಮ್ಯಾನ್ ಹೋಲ್ ಓಪನ್ ಆಗಿ, ಕೆಟ್ಟವಾಸನೆ ಬರ್ತಿದೆ. ಸಾರ್ವಜನಿಕರು ರಸ್ತೆ ದಾಟೋದಕ್ಕೆ ಆಗ್ತಿಲ್ಲ. ವಾಹನ ಸವಾರರು ಸಂಚರಿಸೋಕೆ ಆಗುತ್ತಿಲ್ಲ. ಪಾದಚಾರಿಗಳ ಮೇಲೆ ಈ ಚೇಂಬರ್ ನೀರು ಹಾರುತ್ತಿದೆ.
ಒಂದು ವಾರದಿಂದ ಈ ಸಮಸ್ಯೆ ಕಾಡ್ತಾನೇ ಇದೆ. ಆದ್ರೆ ಅಧಿಕಾರಿಗಳ ಕಣ್ಣಿಗೆ ಮಾತ್ರ ಕಾಣ್ತಿಲ್ಲ. ಇಲ್ಲಿನ ಸ್ಥಳೀಯರು, ವ್ಯಾಪಾರಸ್ಥರು ನಿತ್ಯವೂ ಸಂಕಷ್ಟವನ್ನ ಎದುರಿಸುತ್ತಿದ್ದಾರೆ, ಹೆಮ್ಮಿಗೆಪುರದಿಂದ ಕೆಂಗೇರಿ ತಲುಪವವರೆಗೂ ರಸ್ತೆ ಸಮಸ್ಯೆ ಬಹಳಷ್ಟಿದೆ.ಪ್ರತಿನಿತ್ಯವೂ ಈ ರಸ್ತೆಯಿಂದ ನರಕ ಅನುಭವಿಸುತ್ತಿರುವ ಜನ ಆಸ್ಪತ್ರೆ ಸೇರುತ್ತಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
06/08/2022 10:42 pm