ಬೆಂಗಳೂರು: ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಡಿವಾಳ ಕೆರೆಯಲ್ಲಿ ಗಿಡಗಳು ತುಂಬಿ ಬೋಟಿಂಗ್ ಸಂಪೂರ್ಣವಾಗಿ ನಿಂತು ಹೋಗಿತ್ತು. ಇದರಿಂದ ಬೋಟಿಂಗ್‌ಗಾಗಿ ಬಂದ ಪ್ರವಾಸಿಗಳು ನಿರಾಸೆ ಉಂಟಾಗಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ಇದೊಂದೇ ಕೆರೆಯಲ್ಲಿ ಬೋಟಿಂಗ್ ಇದ್ದ ಕಾರಣ ದಿನನಿತ್ಯ ಹಲವಾರು ಜನ ಬರುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೋಟಿಂಗ್ ಸಂಪೂರ್ಣವಾಗಿ ನಿಂತು ಹೋಗಿತ್ತು.
ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಗಿಡಗಳನ್ನು ತೆರವು ಮಾಡಿ ಮತ್ತೆ ಬೋಟಿಂಗ್ ಆರಂಭವಾಗುವಂತೆ ಮಾಡಿದ್ದಾರೆ. ಇದರಿಂದ ಈಗ ಮತ್ತೆ ಇಲಾಖೆಗೆ ಆದಾಯ ಕೂಡ ಬರುತ್ತೆ ಮತ್ತೆ ಕೆರೆ ನೋಡಲು ಬರುವ ಪ್ರವಾಸಿಗಳು ಬೋಟಿಂಗ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
06/08/2022 05:11 pm