ಯಲಹಂಕ: ಒಂದ್ಕಡೆ ಹಬ್ಬ ಮಾಡಲೇಬೇಕು ಎಂಬ ಹಂಬಲ. ಮತ್ತೊಂದ್ಕಡೆ ಹೂ- ಹಣ್ಣುಗಳ ಬೆಲೆ ಗಗನಕ್ಕೇರಿದೆ. ಈ ಮಧ್ಯೆ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ... ಇವೆಲ್ಲವೂ ಸೇರಿ ಈ ಸಲದ ಶ್ರೀ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಳೆಗುಂದುವಂತೆ ಮಾಡಿವೆ.
ಯಲಹಂಕದ ರೈತರ ಸಂತೆ ಸರ್ಕಲ್ ಹೂ-ಹಣ್ಣು ಹಾಗೂ ತರಕಾರಿ ಖರೀದಿ ಸ್ಥಳ. ಹಬ್ಬ ಬಂತೆಂದರೆ ಸಾಕು ಕಾಲಿಡಲಾಗದಷ್ಟು ಜನದಟ್ಟಣೆ ಇದ್ದರೂ, ಇಲ್ಲಿ ಸಖತ್ ವ್ಯಾಪಾರ ಆಗ್ತಿತ್ತು. ಆದರೆ, ಈ ಬಾರಿ ಬೆಲೆ ಏರಿಕೆ ಬಿಸಿ ಗ್ರಾಹಕರದ್ದಾದರೆ, ಹಾಕಿರುವ ಲಕ್ಷಾಂತರ ಬಂಡವಾಳ ವಾಪಸ್ ಬಂದ್ರೆ ಸಾಕು ಅಂತಿದ್ದಾರೆ ವ್ಯಾಪಾರಿಗಳು.
ಈ ಎಲ್ಲಾ ವಿದ್ಯಮಾನಗಳ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ಅವರು ಯಲಹಂಕ ಸಂತೆ ಸರ್ಕಲ್ ಬಳಿ ನಡೆಸಿರುವ Walk through ಇಲ್ಲಿದೆ ನೋಡಿ...
PublicNext
04/08/2022 08:01 pm