ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಬ್ಬು ನಾರುತ್ತಿದೆ ಕೃಷ್ಣರಾಜಪುರ ಸ್ಕೈವಾಕ್ !

ವರದಿ- ಗೀತಾಂಜಲಿ

ಕೃಷ್ಣರಾಜಪುರ:ನಗರದ ಬಹುತೇಕ‌ಕಡೆ ಸ್ಕೈವಾಕ್ ಇದೆ.‌ಆ ಸ್ಕೈವಾಕ್ ಗಳ ಉಪಯೋಗ ಒಂದು ಕಡೆ ಆಗ್ತಿದೆ.ಮತ್ತೊಂದು ಕಡೆ ಆಗ್ತಿಲ್ಲ. ಆದ್ರೆ ಇದೀಗ ಕೃಷ್ಣರಾಜಪುರದ ಸ್ಕೈವಾಕ್ ಉಪಯೋಗವಾಗ್ತಿದೆ. ಆದ್ರು ಅಲ್ಲಿ ಕಾಲಿಡಲು ಮಟ್ಟಿಗೆ ಅಧ್ವಾನವಾಗಿದೆ. ಅಷ್ಟಕ್ಕೂ ಯಾಕೆ ಅಂತೀರಾ.? ಈ ಸ್ಟೋರಿ ನೋಡಿ.

ಕೃಷ್ಣರಾಜಪುರದಲ್ಲಿ ಹೊಸದಾಗಿ ಸ್ಕೈವಾಕ್ ನಿರ್ಮಿಸಿದ್ದಾರೆ.ಇದು ನಿರ್ಮಾಣವಾಗಿ ಕೇವಲ 8 ತಿಂಗಳಾಗಿದೆ ಅಷ್ಟೆ. ಜನರಿಗೆ ಉಪಯೋಗವಾಗ್ಲಿ ಅಂತಾ ಈ ಸ್ಕೈವಾಕ್ ಮಾಡಿದ್ದಾರೆ. ಈ ಸ್ಕೈವಾಕ್ ಬಳಸಿ ಕೆಳಗೆ ಇಳಿದ್ರೆ, ಅಲ್ಲೆ ಬಸ್ ಸ್ಟ್ಯಾಂಡ್ ಸಿಗುತ್ತದೆ. ಮಾರ್ಕೆಟ್ ಕೂಡ ಸಿಗುತ್ತೆ.ಆದ್ರೆ ಈ ಸ್ಕೈವಾಕ್ ಮಾರುಕಟ್ಟೆಗಿಂತಲೂ ಗಬ್ಬಾಗಿದೆ.

ಹೌದು.ಸ್ಕೈವಾಕ್ ನಲ್ಲಿ ಸ್ವಚ್ಛತೆ ಅನ್ನುವುದು ಮರೀಚಿಕೆಯಾಗಿ ಹೋಗಿದೆ.ಅಲ್ಲಲ್ಲಿ ಉಗುಳುತ್ತಾರೆ. ಅಲ್ಲೇ ಕಸ ಇದೆ. ಎಲ್ಲಿ ನೋಡಿದ್ರು ಬರೀ ಕಸ.ಪಾಪಾ ಕಸದ ನಡುವೆನೇ ವ್ಯಾಪಾರಿಗಳು ವ್ಯಾಪಾರ ಮಾಡ್ತಾರೆ.ನೂರಾರು ಜನರು ಕೂಡ ಓಡಾಡುತ್ತಾರೆ.ಆದ್ರೆ ತುಂಬ ದಿನದಿಂದ ಗಬ್ಬೇದ್ದು ನಾರುತ್ತಿರುವ ಕಸವನ್ನ ಕ್ಲೀನ್ ಮಾಡುವವರೇ ಇಲ್ಲಿ ಇಲ್ಲ.

ಸ್ಕೈವಾಕ್ ಮೇಲೆ ಓಡಾಡುವುದಕ್ಕೆ ಜನರಿಗೆ ಬೇಸರವಾಗುತ್ತೆ.ಅಷ್ಟರ ಮಟ್ಟಿಗೆ ಅವ್ಯವಸ್ಥೆಯಿಂದ ಕೂಡಿದೆ.ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

Edited By :
PublicNext

PublicNext

02/08/2022 10:32 pm

Cinque Terre

32.82 K

Cinque Terre

0

ಸಂಬಂಧಿತ ಸುದ್ದಿ