ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮುಗಿಯದ ಕಾಮಗಾರಿ, ತಪ್ಪುತ್ತಿಲ್ಲ ಕಿರಿಕಿರಿ

ಬೆಂಗಳೂರು: ಬೆಂಗಳೂರಿನಲ್ಲಿ‌ ಎಲ್ಲಿ‌ ನೋಡಿದರೂ ಮೊದಲಿಗೆ ಕಣ್ಣಿಗೆ ಕಾಣುವುದು ರಸ್ತೆ ಮಧ್ಯದಲ್ಲಿ ಗುಂಡಿ ತೋಡಿರುವ ದೃಶ್ಯಗಳು. ಇದರಿಂದ ಜನ ದಿನನಿತ್ಯ ಬೇಸತ್ತಿದ್ದಾರೆ.

ಹೀಗೆ ಇವತ್ತಿನ ನಮ್ಮ ಸ್ಟೋರಿಯಲ್ಲು ಇಂತಹದೇ ಸಮಸ್ಯೆ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿದ್ದೇವೆ. ಸಮಾಜದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿದಿನವೂ ವರದಿ ಮಾಡುತ್ತೆ. ಇವತ್ತು ಸಹ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಇಂತಹ ಒಂದು ಸಮಸ್ಯೆ ಕಾಡ್ತಿದೆ. ಹಾಗಾದ್ರೆ ಏನ್ ಸಮಸ್ಯೆ, ಯಾವ ಏರಿಯಾ ಅಂತೀರಾ ನೀವೆ ನೋಡಿ.

ಹೌದು ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ಎಂಬ ಏರಿಯಾದಲ್ಲಿ (BWSSB) ನವರು ಮೋರಿಯನ್ನ ತೋಡಿ ಅರ್ಧಂಬರ್ಧ ಕಾಮಗಾರಿ ಮಾಡಿ ಬಿಟ್ಟಿದ್ದಾರೆ. ಇದ್ರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.. ವ್ಯಾಪಾರ ವಹಿವಾಟು ಮಾಡಲಾಗ್ದೆ ಪರದಾಡುತ್ತಿದ್ದಾರೆ. ಇದು ನಮ್ಮ ಆಟೋ ಸ್ಟಾಂಡ್ ಇಲ್ಲಿ ಗಾಡಿಗಳನ್ನ ನಿಲ್ಲಿಸಲಾಗ್ದೆ, ವಾಸನೆ ಇಂದ ಬಸ್ ಸ್ಟಾಪ್ ಗಳಲ್ಲಿ ಆಟೋಗಳನ್ನ ನಿಲ್ಲಿಸಿಕೊಳ್ತಿದ್ದೇವೆ. ಅಲ್ಲಿ ಬಿಎಂಟಿಸಿ ಯವರು ಬಂದು ಫೈನ್ ಹಾಕುತ್ತಾರೆ. ಹಾಗಾದ್ರೆ ನಾವು ಗಾಡಿ ಎಲ್ಲಿ ನಿಲ್ಲಿಸೋದು ಎಂದು ಆಟೋ ಡ್ರೈವರ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇದೇ ಸ್ಥಳದಲ್ಲಿ ಹೊಟ್ಟೆಪಾಡಿಗಾಗಿ ಚಿಲ್ಲರೆ ಅಂಗಡಿ ನಡೆಸುತ್ತಿರುವ ಅಜ್ಜಿ ಇದ್ದಾರೆ. ಅವರು ಏನೇಳ್ತಾರೆ ನೀವೆ ನೋಡಿ.

ಒಟ್ನಲ್ಲಿ ಪ್ರತಿದಿನವೂ BWSSB ನವರಿಂದ ಜನರು ಒಂದಲ್ಲ ಒಂದು ರೀತಿಯಲ್ಲಿ‌ ಸಂಕಷ್ಟವನ್ನ ಎದುರಿಸುತ್ತಿದ್ದಾರೆ.‌‌ ಸರ್ಕಾರ ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡು ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕಿದೆ.

Edited By : Manjunath H D
PublicNext

PublicNext

21/07/2022 06:46 pm

Cinque Terre

32.04 K

Cinque Terre

1

ಸಂಬಂಧಿತ ಸುದ್ದಿ