ಬೆಂಗಳೂರು: ಹೊಸ ಮೀಟರ್ ಗೆಂದು ಅರ್ಜಿ ಸಲ್ಲಿಸಿದ್ರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ವಿದ್ಯುತ್ ಮೀಟರ್ ಸಕಾಲಕ್ಕೆ ಬಾರದೇ ಸಾಮಾನ್ಯ ಜನರು ಪರದಾಡುವಂತಾಗಿದೆ. ಟೆಂಡರ್ ನೀಡಿದ ಗುತ್ತಿಗೆ ಕಂಪನಿಗಳು ಸೂಕ್ತ ಕಾಲಾವಧಿಯಲ್ಲಿ ಮೀಟರ್ ಪೂರೈಸದ ಕಾರಣಕ್ಕೆ ಬೆಸ್ಕಾಂ ಮೀಟರ್ ವಿತರಣಾ ಕೇಂದ್ರಗಳಲ್ಲಿ ಹಾಗೂ ಸ್ಟಾಕ್ ನಲ್ಲಿ ವಿದ್ಯುತ್ ಮೀಟರ್ ಕೊರತೆ ಕಂಡು ಬಂದಿದೆ.
ಜನಸ್ನೇಹಿ ಯೋಜನೆಯಂತೆ ವಿದ್ಯುತ್ ಮೀಟರ್ ಅರ್ಜಿ ಹಾಕಿದ ಮೂರು ಕಾರ್ಯ ನಿರ್ವಹಣಾ ದಿನಗಳಲ್ಲಿ ವಿದ್ಯುತ್ ಮೀಟರ್ ಪೂರೈಸಬೇಕು. ವಾಸ್ತವದಲ್ಲಿ 25-30 ದಿನ ಅಥವಾ ಅದಕ್ಕಿಂತ ಹೆಚ್ಚಿನ ದಿನ ತೆಗೆದುಕೊಳ್ಳಲಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಒಟ್ಟು 4 ವಲಯಗಳಿದ್ದು, 145 ಉಪ ವಿಭಾಗಗಳಿವೆ. ಈ ಉಪ ವಿಭಾಗಗಳಲ್ಲಿ ಪ್ರತಿ ದಿನ 50-100 ಹೊಸ ಕನೆಕ್ಷನ್ ಅರ್ಜಿಗಳು ಬರ್ತಿದ್ದು, 7250 ರಿಂದ 14,500 ವಿದ್ಯುತ್ ಮೀಟರ್ ಗೆ ಬೇಡಿಕೆ ಇದೆ.
ಇನ್ನು ಬೆಸ್ಕಾಂ 124 ಸಿಟಿ ಆಪರೇಟೆಡ್ ಮೀಟರ್ (18 ಕಿಲೋ ವ್ಯಾಟ್ ಗಿಂತ ಮೇಲ್ಪಟ್ಟ ಹೆಚ್ಚಿನ ಲೋಡ್ ಗೆ ಸಂಪರ್ಕ ಕಲ್ಪಿಸುವ ಮೀಟರ್ ) 12917 ಸಿಂಗಲ್ ಪೇಸ್ ಮೀಟರ್, 116 ತ್ರಿಪೇಸ್ ವಿದ್ಯುತ್ ಮೀಟರ್ ಸ್ಟಾಕ್ ಇದೆ. ಆದರೆ ಅರ್ಜಿಗಳು ಹೆಚ್ಚಾಗಿ ಬರ್ತಿರುವ ಹಿನ್ನೆಲೆಯಲ್ಲಿ ಮೀಟರ್ ಗ್ರಾಹಕರಿಗೆ ನೀಡಲಾಗ್ತಿಲ್ಲ.
ಇನ್ನೂ ವಿಪರ್ಯಾಸ ಅಂತಂದ್ರೆ ಹಣ ಪಾವತಿಯ ಸರ್ವರ್ ಕೂಡಾ ಆಗಾಗ ಡೌನ್ ಆಗ್ತಾಯಿದ್ದು, ಹಣ ಪಾವತಿಗೆ ಕಷ್ಟವಾಗಿದೆ ಎಂಬ ಆರೋಪ ಗುತ್ತಿಗೆದಾರರು, ಗ್ರಾಹಕರಿಂದ ಕೇಳಿ ಬಂದಿದೆ.
Kshetra Samachara
16/07/2022 10:49 pm