ಬೆಂಗಳೂರು : ಈಗಲೇ ಇಂಧನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜಧಾನಿ ಬೆಂಗಳೂರಿನ ವಾಹನ ಸವಾರರಿಗೆ ಬಿಬಿಎಂಪಿ ಪಾರ್ಕಿಂಗ್ ಬರೆ ಎಳೆಯಲು ಮಂದಾಗಿದ್ದು, ಪಾರ್ಕಿಂಗ್ ಶುಲ್ಕ ಕಡ್ಡಾಯಗೊಳಿಸುತ್ತಿದೆ.
ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ. ಇನ್ನೂ, ಈ ಸ್ಥಳದಲ್ಲಿ ನಿಲ್ಲುವ ಎಲ್ಲಾ ಬಗೆಯ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಸದ್ಯ ಸಮಯದ ಅನ್ವಯ ಶುಲ್ಕ ನಿಗಧಿ ಆಗಲಿದ್ದು, ಪ್ರತಿ ಗಂಟೆಗೆ 20 ರೂ., ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ ಮೆಜೆಸ್ಟಿಕ್, ಗಾಂಧಿನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಪಾಲಿಕೆಯಿಂದ ಯೋಜನೆ ರೂಪಿಸಿದ್ದು, ಅದರಂತೆ ಪ್ರಾಯೋಗಿಕವಾಗಿ ಬೆಂಗಳೂರಿನ ಗಾಂಧಿನಗರದಲ್ಲಿ ಚಾಲನೆ ನೀಡಲಿದೆ.
ಗಾಂಧಿನಗರದ ಪ್ರಮುಖ 12 ರಸ್ತೆಗಳನ್ನು ಪಾರ್ಕಿಂಗ್ ವ್ಯವಸ್ಥೆ ಗೆ ಅಳವಡಿಕೆ ಬಿಬಿಎಂಪಿ ಸಿದ್ದತೆ ಮಾಡಿಕೊಂಡಿದೆ. ಇಲ್ಲಿನ ಗಾಂಧಿನಗರದ 2,3,4,5,6 ನೇ ಕ್ರಾಸ್ ರಸ್ತೆಗಳು, ಯಾದವ್ ಹಾಸ್ಟೆಲ್ ರಸ್ತೆ, ಸ್ವಪ್ನ ಬುಕ್ ಹೌಸ್ ರಸ್ತೆ, ಶೇಷಾದ್ರಿ ರಸ್ತೆ, ರಾಮಚಂದ್ರ ರಸ್ತೆ, ಫ್ರೀಡಂ ಪಾರ್ಕ ರಸ್ತೆಗಳು ಇನ್ನೂ ಮುಂದೆ ಪಾರ್ಕಿಂಗ್ ಶುಲ್ಕಗೆ ಒಳಗಾಗಲಿವೆ
ಪೇ ಆಂಡ್ ಪಾರ್ಕಿಗ್ ವ್ಯವಸ್ಥೆ ಹೇಗೆ?: ನಿಗಧಿತ ಸ್ಥಳದಲ್ಲಿಯೇ ಪಾರ್ಕ್ ಮಾಡಬೇಕು. ಎಲ್ಲೆದರಲ್ಲಿ ಪಾರ್ಕ್ ಮಾಡಿದರೆ ಬೀಳುತ್ತೆ ದಂಡ. ಹಣ ಪಾವತಿಸಿ ವಾಹನವನ್ನು ಪಾರ್ಕಿಂಗ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಒಂದು ಕಡೆ ಈ ರೀತಿಯ ವ್ಯವಸ್ಥೆ ತಲೆ ಎತ್ತಲಿದ್ದು, ಹಂತ ಹಂತವಾಗಿ ಎಂಜಿ ರಸ್ತೆ, ಕಮರ್ಶಿಯಲ್ ಸ್ಟ್ರೀಟ್ ಸೇರಿದಂತೆ ಅನೇಕ ಕಡೆ ಪಾರ್ಕಿಂಗ್ ಶುಲ್ಕ ಕಡ್ಡಾಯವಾಗಲಿದೆ.
Kshetra Samachara
06/07/2022 06:12 pm