ಬೆಂಗಳೂರು: ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ಇದೇ ರೋಡ್ ಮೇಲೆ ರಕ್ಕಸ ಗುಂಡಿ ಬಲಿಗಾಗಿ ಬಾಯ್ದೆರೆದು ಕಾದು ಕುಳಿತಿದೆ. ಇವೆಲ್ಲವನ್ನು ಕಂಡೂ ಕಾಣದಂತೆ ಬಿಬಿಎಂಪಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ಇದು ಬನ್ನೇರುಘಟ್ಟ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮುಖ್ಯರಸ್ತೆ. ಇದೇ ರಸ್ತೆ ಮಧ್ಯದಲ್ಲಿರುವ ಬೃಹತ್ ಗುಂಡಿಯಿಂದಾಗಿ ವಾಹನ ಸವಾರರು ಪ್ರಾಣಭೀತಿಯಿಂದ ಪರದಾಡುತ್ತಾ ಸಂಚರಿಸುವ ಸ್ಥಿತಿಯಿದೆ. ಬಸ್- ಲಾರಿ ಚಾಲಕರು ಈ ಗುಂಡಿ ಹತ್ತಿರ ಬಂದ ಕೂಡಲೇ ವಾಹನವನ್ನು ನಿಧಾನವಾಗಿ ಗುಂಡಿಯಲ್ಲಿ ಇಳಿಸಿ ಸಾಗುತ್ತಾರೆ ಅಂದರೆ ಈ ರಸ್ತೆ ಗುಂಡಿಯ ಗಾತ್ರ ಹೇಗಿರಬಹುದೆಂದು ನೀವೇ ಊಹಿಸಿ.
ಬಿಬಿಎಂಪಿ ಅಧಿಕಾರಿಗಳು ಕಾಟಾಚಾರಕ್ಕೆ ಗುಂಡಿಯಲ್ಲಿ ಮಣ್ಣು ತುಂಬಿಸಿ ಹೋಗುತ್ತಾರೆ. ಮಳೆ ಬಂದರೆ ಸಾಕು, ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಆ ಗುಂಡಿಯಲ್ಲೀಗ ಬರೀ ನೀರೇ ತುಂಬಿದ್ದು, ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಎದುರಾಗಿದೆ.
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
03/07/2022 07:11 pm