ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ
ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ "ಪಬ್ಲಿಕ್ ನೆಕ್ಸ್ಟ್" ಬನಶಂಕರಿಯ ರಾಜರಾಜೇಶ್ವರಿ ಬಡಾವಣೆಯಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಮತ್ತು ಸ್ಥಳೀಯ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.
ಹಲವಾರು ವರ್ಷಗಳಿಂದ ನೀರಿನ ಬವಣೆ ಪಡುತ್ತಿದ್ದರು ಬಡಾವಣೆ ನಿವಾಸಿಗಳು. ಇದೀಗ ಪಬ್ಲಿಕ್ ನೆಕ್ಸ್ಟ್ ವರದಿ ನಂತರ ಎಚ್ಚೆತ್ತುಕೊಂಡ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಕೊನೆಗೂ ಈ ಬಡಾವಣೆಯ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ.
12 ವರ್ಷಗಳಿಂದ ಈ ಬಡಾವಣೆಯ ಜನರು ಕುಡಿಯುವ ನೀರಿಗಾಗಿ ಹಪಹಪಿಸಿದ್ದರು. ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ದಿನ ಬಿಟ್ಟು ದಿನ ಈ ಬಡಾವಣೆಗೆ ನೀರು ಬಿಡೋದಿಕ್ಕೆ ನಿಗದಿತ ಟೈಮ್ ಕೂಡ ಇರಲಿಲ್ಲ. ಆದರೆ, ಈಗ ದಿನನಿತ್ಯ ಈ ಬಡಾವಣೆ ಜನರಿಗೆ ನೀರು ಸಿಗುತ್ತಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.
-ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
Kshetra Samachara
30/06/2022 07:45 pm